ವಿಶ್ವಸಂಸ್ಥೆ,ಮಾ.21: ವಿಶ್ವ ಸಮೃದ್ಧಿಯ ವರದಿಯಲ್ಲಿ ಭಾರತ 140 ನೆ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಾರತ ಶ್ರೇಯಾಂಕದಲ್ಲಿ ಏಳು ಸ್ಥಾನ ಕೆಳಕ್ಕೆ ಕುಸಿದಿದೆ.ಫಿನ್ಲೆಂಡ್ ನಿರಂತರ ಎರಡನೆ ವರ್ಷವೂ ಮೊದಲ ಸ್ಥಾನದಲ್ಲಿದೆ. ಸಮೃದ್ಧಿ ಸೂಚ್ಯಂಕದಲ್ಲಿ ಭಾರತ ಪಾಕಿಸ್ತಾನಕ್ಕಿಂತ ಹಿಂದಿದೆ. ವಿಶ್ವಸಂಸ್ಥೆಯ ನಿರಂತರ ಪ್ರಗತಿ ಉಪಸ್ಥಿತಿ ನೆಟ್ವರ್ಕ್ ಬುಧವಾರ ಈ ವರದಿಯನ್ನು ಬಿಡುಗಡೆಗೊಳಿಸಿದೆ.
ವಿಶ್ವಸಂಸ್ಥೆ 2012 ಮಾಚ್ 20ಕ್ಕೆ ವಿಶ್ವ ಸಮೃದ್ಧಿ ದಿವಸವನ್ನು ಘೋಷಿಸಿತ್ತು. ಆರು ವಿಭಾಗಗಳ ಆಧಾರದಲ್ಲಿ ವಿಶ್ವಸಂಸ್ಥೆ ಸಮೃದ್ಧಿ ದರವನ್ನು ನಿರ್ಧರಿಸುತ್ತದೆ. ಆದಾಯ, ಆರೋಗ್ಯ, ಸಾಮಾಜಿಕ ಸಹಕಾರ ಸ್ವಾತಂತ್ರ್ಯ, ವಿಶ್ವಾಸ ಮತ್ತು ಉದಾರತೆಗಳು ಸೇರಿವೆ. ವರದಿಯ ಪ್ರಕಾರ ಕಳೆದ ಕೆಲವು ವರ್ಷಗಳಲ್ಲಿ ಸಮಗ್ರ ವಿಶ್ವ ಸಮೃದ್ಧಿಯಲ್ಲಿ ಕುಸಿತವಾಗಿದೆ. ಭಾರತದಲ್ಲಿ ನಿರಂತರ ಕುಸಿತ ಕಂಡು ಬಂದಿದೆ ಭಾರತ 2018ರಲ್ಲಿ 133ನೆ ಸ್ಥಾನದಲ್ಲಿತ್ತು. ಈ ವರ್ಷ 140ನೆ ಸ್ಥಾನಕ್ಕೆ ಕುಸಿದಿದೆ.
ವಿಶ್ವಸಂಸ್ಥೆಯ ಏಳನೆ ವಾರ್ಷಿಕ ಹ್ಯಾಪಿನೆಸ್ ವರದಿಯಲ್ಲಿ 156 ದೇಶಗಳಿದ್ದು ಇದರಲ್ಲಿ ಭಾರತದ ಸ್ಥಾನ 140ಕ್ಕಿಳಿಕೆಯಾಗಿದೆ. ಇದರಲ್ಲಿ ಜನರಲ್ಲಿ ಉದಾಸೀನತೆ, ವೈಶ್ಯಮ್ಯ, ಸಹಿತ ನಕಾರಾತ್ಮಕ ಭಾವನೆಗಳು ಹೆಚ್ಚಳವಾಗಿದ್ದು ಕಂಡು ಬರುತ್ತದೆ. ಫಿನ್ಲೆಂಡ್ ನಿರಂತರ ಎರಡನೆ ವರ್ಷವೂ ಸಮೃದ್ಧಿ ಅಥವಾ ಹ್ಯಾಪಿನೆಸ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದೆ. ಪಾಕಿಸ್ತಾನ 67 ಸ್ಥಾನದಲ್ಲಿದ್ದರೆ. ಬಾಂಗ್ಲಾದೇಶ 125ನೆ ಸ್ಥಾನದಲ್ಲಿಯೂ ಚೀನ 93ನೆ ಸ್ಥಾನದಲ್ಲಿದೆ. ಯುದ್ಧಗ್ರಸ್ತ ಸುಡಾನ್ನಿಂದಾಗಿ ಮಧ್ಯಆಫ್ರಿಕದ ಗಣರಾಜ್ಯ 155ನೆ ಸ್ಥಾನ, ಅಫ್ಘಾನಿಸ್ತಾನ 154, ತಾಂಝಾನಿಯ 153, ರವಾಂಡ 152ನೆ ಸ್ಥಾನದಲ್ಲಿದೆ.ಜಗತ್ತಿನ ಅತಿ ಶ್ರೀಮಂತ ದೇಶವಾಗಿದ್ದರೂ ಸಮೃದ್ಧಿಯ ವಿಚಾರದಲ್ಲಿ ಅಮೇರಿಕಾ 19ನೆ ಸ್ಥಾನದಲ್ಲಿದೆ.













