ಚೆರುಪ್ಪಳಶ್ಶೇರಿ, ಮಾ.21: ಇಲ್ಲಿರುವ ಸ್ಥಳೀಯ ಕಮಿಟಿ ಕಚೇರಿಯಲ್ಲಿ ಡಿವೈಎಫ್ಐ ನಾಯಕ ಅತ್ಯಾಚಾರ ಮಾಡಿದ್ದಾನೆಂದು ಯುವತಿಯೊಬ್ಬಳು ಚೆರುಪ್ಪಳಶೇರಿ ಮಂಗರ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾಳೆ. ರಸ್ತೆ ಬದಿ ನವಜಾತ ಶಿಶು ಸಿಕ್ಕಿದ ಹಿನ್ನೆಲೆಯಲ್ಲಿ ನಡೆದ ಪೊಲೀಸ್ ತನಿಖೆಯ ಕೊನೆಗೆ ಪ್ರಕರಣ ಅತ್ಯಾಚಾರ ಘಟನೆಯೆಡೆಗೆ ಬಂದು ನಿಂತಿದೆ.
ಸಿಪಿಎಂ ಕಚೇರಿಯಲ್ಲಿ ಡಿವೈಎಫ್ಐ ನಾಯಕ ಅತ್ಯಾಚಾರ ಮಾಡಿದ್ದ ಎಂದು ಯುವತಿ ದೂರು ನೀಡಿದ್ದು ಕಳೆದ ತಿಂಗಳು ಹದಿನಾರನೆ ತಾರೀಕಿನಂದು ರಸ್ತೆ ಬದಿಯಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ನಂತರ ತನಿಖೆಯಲ್ಲಿ ಶಿಶುವಿನ ಅವಿವಾಹಿತ ತಾಯಿಯನ್ನು ಪೊಲೀಸರು ಪತ್ತೆಹಚ್ಚಿದ್ದರು.
ಕಳೆದ ವರ್ಷ ಮ್ಯಾಗಝಿನ್ ತಯಾರಿಸುವ ನಿಟ್ಟಿನಲ್ಲಿ ಚರ್ಚೆಗೆ ಪಾರ್ಟಿ ಕಚೇರಿಗೆ ಯುವತಿ ಬಂದಿದ್ದಾಗ ಡಿವೈಎಫ್ಐ ನಾಯಕ ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಅತ್ಯಾಚಾರಕ್ಕೆ ಗುರಿಪಡಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಲೋಕಸಭಾ ಚುನಾವಣೆ ನಿಕಟಗೊಂಡಿದ್ದರಿಂದ ಸಿಪಿಎಂಗೆ ಇದು ಭಾರೀ ಹಿನ್ನಡೆಯಾಗಿದೆ.
ಇದೇವೇಳೆ ಆರೋಪಕ್ಕೆ ಗುರಿಯಾದ ಯುವಕನಿಗೂ ಪಾರ್ಟಿಗೂ ಸಂಬಂಧವಿಲ್ಲ ಎಂದು ಸಿಪಿಎಂ ಸ್ಪಷ್ಟೀಕರಣ ನೀಡಿದೆ.












