ಭಯೋತ್ಪಾದನಾ ಘಟನೆ ನಡೆದು ಒಂದು ವಾರದೊಳಗೆ ನ್ಯೂಝಿಲೆಂಡ್ ಶಾಲೆಯಲ್ಲಿ ಹಿಜಾಬ್ ಗೆ ನಿಷೇಧ: ಎಲ್ಲೆಡೆ ಅಚ್ಚರಿ, ಆಘಾತ

0
1672

ಅಕ್ಲಂಡ್, ಮಾ. 21: ಮುಸ್ಲಿಮ್ ಸಮುದಾಯವನ್ನು ಬೆಂಬಲಿಸುವಂತೆ ದೇಶವೇ ಕರೆ ನೀಡುತ್ತಿದ್ದರೂ ಅಕ್ಲೆಂಡಿನ ಉನ್ನತ ಬಾಲಕಿಯರ ಶಾಲೆಯೊಂದು ಮುಸ್ಲಿಮರ ಹಿಜಾಬ್ ತಮ್ಮ ಶಾಲೆಯ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸುತ್ತದೆ ಎಂದು ಹೇಳಿಕೊಂಡಿದೆ.

ಕ್ರೈಸ್ಟ್ ಚರ್ಚ್‍ನಲ್ಲಿ ಮಸೀದಿಗೆ ಭಯೋತ್ಪಾದಕ ದಾಳಿ ನಡೆದು ಐವತ್ತು ಮಂದಿ ಮುಸ್ಲಿಮರು ಮೃತಪಟ್ಟ ಘಟನೆ ನಡೆದು ಒಂದು ವಾರದಲ್ಲಿಯೇ ನ್ಯೂಝಿಲೆಂಡಿನ ಬಾಲಕಿಯರ ಶಾಲೆಯು ಶಿರವಸ್ತ್ರಕ್ಕೆ ನಿಷೇಧ ಹೇರಿದೆ.

ಡೊಯಿಸನ್ ಗರ್ಲ್ಸ್ ಸ್ಕೂಲಿನ ಪ್ರಾಂಶುಪಾಲ ಹೀತರ್ ಮೆಕ್ರೆಯವರು ಇಸ್ಲಾಮಿಕ್ ಹಿಜಾಬ್ ಉಡುಪು ತಮ್ಮ ಶಾಲೆಯ ಸಮವಸ್ತ್ರ ನಿಬಂಧನೆಯನ್ನು ಉಲ್ಲಂಘಿಸುತ್ತಿದ್ದು ಇನ್ನು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಶಾಲೆಯ ಅಧ್ಯಾಪಕಿಯರಿಗೂ ಇದು ಅನ್ವಯ ಎಂದು ಅವರು ಹೇಳಿದರು.

ಮುಸ್ಲಿಮರು ಧರಿಸುವ ಶಿರವಸ್ತ್ರ ಶಾಲೆಯ ಸಮವಸ್ತ್ರದ ಭಾಗವಲ್ಲ ಎಂದು ಡೊಯಿಸನ್ ಸ್ಕೂಲ್ ಅಧಿಕಾರಿಗಳು ವಿವರಿಸಿದರು.

ಶಿರವಸ್ತ್ರ ನಿಷೇಧವು ಭಯೋತ್ಪಾದನಾ ದಾಳಿಯ ಒಂದು ವಾರದೊಳಗೆ ಜಾರಿಗೆ ಬಂದಿದೆ. ನ್ಯೂಝಿಲೆಂಡ್ ಹೆರಾಲ್ಡ್ ಗೆ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದು ಶಾಲೆಯು ವೈವಿಧ್ಯತೆಗೆ ಹೆಸರು ವಾಸಿಯಾಗಿದೆ. ಆದರೆ ಸಮವಸ್ತ್ರ ನೀತಿಯ ಮೂಲಕ ಒಂದೇ ಕುಟುಂಬ ಪ್ರಜ್ಞೆಯನ್ನು ಬೆಳೆಸಲು ಬಯಸುತ್ತಿದೆ ಎಂದು ಹೇಳಿದರು.