ಇರಾಕ್: ಟೈಗ್ರಿಸ್ ನದಿಯಲ್ಲಿ ನೌಕೆ ಮುಳುಗಿ ಮಕ್ಕಳು, ಮಹಿಳೆಯರ ಸಹಿತ 100 ಮಂದಿ ಸಾವು

0
852

ಬಾಗ್ದಾದ್,ಮಾ.22: ಇರಾಕಿನ ಮೊಸುಲ್ ಸಮೀಪ ಟೈಗ್ರಿಸ್ ನದಿಯಲ್ಲಿ ನೌಕೆ ಮುಳುಗಿದ್ದು ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ನೌಕೆಯಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು ಮಂದಿ ಇದ್ದು ದುರಂತಕ್ಕೆ ಕಾರಣವೆಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಕುರ್ದ್‍ಗಳು ಹೊಸ ವರ್ಷ ಆಚರಣೆಯ ವೇಳೆ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದರು.

ಗುರುವಾರ ಘಟನೆ ನಡೆಯಿತು ಎಂದು ಉತ್ತರದ ನೈನ್‍ವೇ ಪ್ರಾಂತದಲ್ಲಿ ನಾಗರಿಕ ಸುರಕ್ಷಾಧಿಕಾರಿಯಾಗಿರುವ ಕರ್ನಲ್ ಖಲೀಲ್ ಹೇಳಿದರು. ನವ್‍ರೋಜ್ ಅಂದರೆ ಹೊಸ ವರ್ಷಾಚರಣೆಗಾಗಿ ಜನರು ಅಧಿಕ ಜನಸಂಖ್ಯೆಯಲ್ಲಿ ನೌಕೆಯಲ್ಲಿ ಹೊರಟಿದ್ದರು ಮತ್ತು ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿದ್ದಾರೆ ಎಂದು ವರದಿಗಳು ತಿಳಿಸಿವೆ. ನವರೋಜ್ ವಸಂತ ಋತುವಿನ ಆಗಮನಕ್ಕೆ ಸಂಬಂಧಿಸಿ ಕುರ್ದ್‍ಗಳು ಆಚರಿಸುವ ಹೊಸ ವರ್ಷ ಆಚರಣೆಯಾಗಿದೆ.

ಮೃತದೇಹಗಳ ಹುಡುಕಾಟ ಈಗಲೂ ಮುಂದುವರಿದಿದೆ ಎಂದು ಅರೋಗ್ಯ ಸಚಿವಾಲಯದ ವಕ್ತಾರ ಸೈಫ್ ಅಲ್ ಬದ್ರ್ ತಿಳಿಸಿದರು. ಆದರೆ, ತಾಂತ್ರಿಕ ಕಾರಣಗಳಿಂದ ನೌಕೆ ಮುಳುಗಿದೆ ಎಂದು ಖಲೀಲ್ ಹೇಳಿದರು. ನೌಕೆ ಮುಳುಗುವಾಗ ಅದರಲ್ಲಿ 200 ಮಂದಿ ಇದ್ದರು ಎಂದು ಅವರು ತಿಳಿಸಿದ್ದಾರೆ.