ಕ್ರಿಕೆಟಿಗ ಗೌತಮ್ ಗಂಭೀರ್ ರಾಜಕೀಯಕ್ಕೆ: ದಿಲ್ಲಿಯಿಂದ ಸ್ಪರ್ಧೆ; ಪಕ್ಷ ಯಾವುದು?

0
971

ಹೊಸದಿಲ್ಲಿ, ಮಾ.22: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್‍ರ ಉಪಸ್ಥಿತಿಯಲ್ಲಿ ಗೌತಮ್ ಗಂಭೀರ್ ಬಿಜೆಪಿ ಸದಸ್ಯತ್ವವನ್ನು ಸ್ವೀಕರಿಸಿದರು. ದಿಲ್ಲಿಯಿಂದ ಅವರು ಬಿಜೆಪಿ ಟಿಕೆಟಿನಲ್ಲಿ ಚುನಾವಣೆ ಸ್ಪರ್ಧಿಸಲಿದ್ದಾರೆ.

37 ವರ್ಷದ ಗಂಭೀರ್ 2016ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಏಕದಿನ ಆಡಿದ್ದರು. 2018ರಲ್ಲಿ ಗಂಭೀರ್ ಕೊನೆಯದಾಗಿ ರಣಜಿ ಪಂದ್ಯ ಆಡಿದ್ದರು. ಕಳೆದ ಕೆಲವು ವರ್ಷಗಳಿಂದ ರಾಜಕೀಯ ವಿಷಯದಲ್ಲಿ ಅವರು ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಬಂದಿದ್ದಾರೆ.

ಆದರೆ ಗಂಭೀರ್ ಕೆಲವು ದಿವಸದ ಹಿಂದೆ ಚುನಾವಣೆ ಸ್ಪರ್ಧಿಸುವ ಕುರಿತು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದರು. ನಾನು ಇಡೀ ಜೀವನದಲ್ಲಿ ಕ್ರಿಕೆಟ್ ಆಡುತ್ತಿದ್ದೆ. ಸಂಪೂರ್ಣ ರಾಜಕಾರಣ ವ್ಯಕ್ತಿಯನ್ನು ಬದಲಾಯಿಸುತ್ತದೆ ಎಂದು ಜನರು ಹೇಳುತ್ತಾರೆ. ನನಗೆ ಇಬ್ಬರು ಸಣ್ಣ ಹೆಣ್ಣುಮಕ್ಕಳು ಇದ್ದಾರೆ. ಅವರ ಜೊತೆ ಸಮಯ ವ್ಯಯಿಸಬೇಕಾಗಿದೆ. ಆದರೆ ಚುನಾವಣಾ ಸ್ಪರ್ಧಿಸುವ ಕುರಿತ ವರದಿಯನ್ನು ನಾನೂ ಕೂಡ ಕೇಳಿದ್ದೇನೆ. ಆದರೆ ಈಗ ಐಪಿಎಲ್ ಸ್ಟಾರ್ ಸ್ಪೋರ್ಟ್ಸ್ ಗಾಗಿ ವೀಕ್ಷಕ ವಿವರಣೆ ನೀಡುತ್ತಿದ್ದೇನೆ ಎಂದು ಗಂಭೀರ್ ಸ್ಪಷ್ಟಪಡಿಸಿದ್ದರು.