ಗುಜ್ರಾನ್ವಾಲ,ಮಾ.23: ಶನಿವಾರ ಖಾಸಗಿ ಶಾಲೆಯೊಂದರ ಗೋಡೆ ಕುಸಿದು ಐವರು ಮಕ್ಕಳು ಮತ್ತು ಓರ್ವ ವ್ಯಕ್ತಿ ಮೃತಪಟ್ಟಿದ್ದು ಹದಿಮೂರು ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನದ ಗುಜ್ರಾನವಾಲದಲ್ಲಿ ನಡೆದಿದೆ. ಗುಜ್ರಾನವಾಲದ ಕಾಶ್ಮೀರ ರಸ್ತೆಯಲ್ಲಿರುವ ಶಾಲೆಯಲ್ಲಿ ಪಾಕಿಸ್ತಾನ ದಿನಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಗೋಡೆ ಶಾಲೆಯ ವೇದಿಕೆಗೆ ಕುಸಿದು ಬಿತ್ತು. ಪ್ರೇಕ್ಷಕರಾಗಿ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು. ಘಟನೆಯಲ್ಲಿ ಹದಿಮೂರು ಮಂದಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ರಕ್ಷಣಾಧಿಕಾರಿಗಳು ಮತ್ತು ಪೊಲೀಸ್ ಉಪಾಯುಕ್ತೆ ನೈಲಾ ಬಖಿರ್ ಸ್ಥಳಕ್ಕಾಗಮಿಸಿದ್ದಾರೆ.












