ಕೇರಳಕ್ಕೆ ತಟ್ಟಿದ ಸೂರ್ಯಾಘಾತ; ಇಬ್ಬರಿಗೆ ಗಾಯ

0
1110

ಪುನಲೂರ್,ಮಾ.25: ಕೇರಳದಲ್ಲಿ ಹಲವು ಕಡೆ ಸೂರ್ಯಾಘಾತ ಸಂಭವಿಸಿದ ಘಟನೆಗಳು ವರದಿಯಾಗಿದೆ. ಪುನಲೂರ್‍ಮತ್ತು ಕಾಸರಗೋಡಿನಲ್ಲಿ ಇಬ್ಬರಿಗೆ ಸೂರ್ಯನ ತಾಪದಿಂದಸುಟ್ಟಗಾಯಗಳಾಗಿವೆ. ಲೋಕಸಭಾ ಚುನಾವಣಾ ಪ್ರಚಾರದ ನಡುವೆ ಆರ್‍ಎಸ್‍ಪಿ ನಾಯಕನಿಗೆ ಸೂರ್ಯಾಘಾತವಾಗಿದೆ. ಪುನಲೂರು ಮಂಡಲಂ ಕಾರ್ಯದಶಿ ನಾಸರ್ ಖಾನ್‍ರ ಕೊರಳು ಮತ್ತು ಹೊಟ್ಟೆಯಲ್ಲಿ ಸುಟ್ಟ ಗಾಯಗಳಾಗಿವೆ. ಮಧ್ಯಾಹ್ನ 12 ಗಂಟೆಗೆ ಘಟನೆ ನಡೆದಿದ್ದು. ನಾಸರ್ ಖಾನ್‍ರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು.

ಕಾಸರಗೋಡಿನ ಕುಂಬಳೆಯ ಅಬ್ದುಲ್ ರಶೀದ್ ಎಂಬವರ ಪುತ್ರಿ ಮರ್ವಾಳಿಗೆ(3 ವರ್ಷ) ಸೂರ್ಯತಾಪದಿಂದ ಸುಟ್ಟಗಾಯಗಳಾಗಿವೆ. ಮನೆಯ ಅಂಗಳದಲ್ಲಿ ಮಗು ಆಡುತ್ತಿದ್ದಾಗ ಘಟನೆ ನಡೆದಿದೆ. ಕಣ್ಣೂರಿನ ಪಯ್ಯನ್ನೂರಿನಲ್ಲಿ ವೃದ್ಧರೊಬ್ಬರು ಸೂರ್ಯ ತಾಪಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಚೆಕ್ಕುಕುಂಡ್ ಎಂಬಲ್ಲಿನ ನಾರಾಯಣನ್(68) ಮೃತಪಟ್ಟ ವ್ಯಕ್ತಿ. ನಿರ್ಜನ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಕಾಲಿನಲ್ಲಿ ಸೂರ್ಯಾಘಾತದ ಗಾಯಗಳು ಕಂಡು ಬಂದಿದೆ. ಆದರೆ ಇವರ ಸಾವು ಸೂರ್ಯಾಘಾತದಿಂದ ಸಂಭವಿಸಿದೆ ಎಂದು ವೈದ್ಯರು ಈವರೆಗೂ ದೃಢಪಡಿಸಿಲ್ಲ. ಮೃತದೇಹವನ್ನು ಪೋಸ್ಟ್‌ಮಾರ್ಟಂಗಾಗಿ ಪರಿಯಾರಂ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಗಿದೆ.