ಮದುವೆಯಾಗುವ ಆಶೆ ಈಡೇರಿಲ್ಲ: ಮಂದಿರದಿಂದ ಶಿವಲಿಂಗವನ್ನು ಕದ್ದ ಯುವಕ

0
479

ಸನ್ಮಾರ್ಗ ವಾರ್ತೆ

ಲಕ್ನೊ, ಸೆ.4: ಮದುವೆಯಾಗುವ ಆಶೆ ಸಫಲವಾಗದೆ ನೊಂದ ಯುವಕನೊಬ್ಬ ದೇವಸ್ಥಾನದಿಂದ ಶಿವಲಿಂಗವನ್ನು ಕದ್ದ ಘಟನೆ ಉತ್ತರಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ನಡೆದಿದೆ.

ಭೈರೊಬಾಬಾ ಮಂದಿರದಿಂದ ಶಿವಲಿಂಗ ಕಳವು ನಡೆದಿದ್ದು, ಪ್ರಕರಣದ ಕುರಿತು ಭಕ್ತರು ಮಂದಿರ ಬಂದಾಗ ಗೊತ್ತಾಗಿದ್ದು ನಂತರ ದೇವಸ್ಥಾನಕ್ಕೆ ಸಂಬಂಧಪಟ್ಟವರು ಮಹೇವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಂತರ ಪೊಲೀಸರ ತನಿಖೆಯಲ್ಲಿ ಕೃಷಿ ಜಮೀನಿನಲ್ಲಿ ಎಲೆ, ಬಿದಿರುಗಳನ್ನು ಮುಚ್ಚಿಟ್ಟ ಸ್ಥಿತಿಯಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿ ಕುಃಹಿಯಾವಾಹ ಎಂಬಲ್ಲಿನ ಛೋಟು ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರಾವಣ ತಿಂಗಳಲ್ಲಿ ವ್ರತ ಹಿಡಿದು ಮನಸಾರೆ ಪ್ರಾರ್ಥಿಸಿದರೂ ತನ್ನ ಮದುವೆಯಾಗುವ ಆಶೆ ಈಡೇರಲಿಲ್ಲ. ಆದ್ದರಿಂದ ಶಿವನಲ್ಲಿ ನಿರಾಸೆಗೊಂಡೆ. ಅದಕ್ಕಾಗಿ ಶಿವಲಿಂಗವನ್ನೇ ಎತ್ತಿಕೊಂಡು ಬಂದೆ ಎಂದು ಯುವಕ ಹೇಳಿದ್ದಾನೆ. ಯುವಕನ ವಿರುದ್ಧ  370ನೇ ಸೆಕ್ಷನ್ ಪ್ರಕಾರ ಕಳ್ಳತನ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ.