12 ವರ್ಷದ ವಿದ್ಯಾರ್ಥಿಯ ಹತ್ಯೆ: ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಶಾಲಾಡಳಿತ; ಡೆಹ್ರಾಡೂನ್ ನಲ್ಲಿ ಹೃದಯವಿದ್ರಾವಕ ಘಟನೆ

0
1558

ಡೆಹ್ರಾಡೂನ್,ಮಾ. 28: ಬಿಸ್ಕತ್ ಕದ್ದನೆಂದು ಆರೋಪಿಸಿ ಹನ್ನೆರಡು ವರ್ಷದ ಬಾಲಕನನ್ನು ಸೀನಿಯರ್ ವಿದ್ಯಾರ್ಥಿಗಳು ಹೊಡೆದಿದ್ದಾರೆ. ಹೊಡೆತಕ್ಕೊಳಗಾದ ಮಗು ಮೃತಪಟ್ಟಿದೆಯೆಂದಾಗ ಶಾಲಾಡಳಿತದವರು ಮೃತದೇಹದ ಶವಸಂಸ್ಕಾರ ನಡೆಸಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಪ್ರಕರಣದಲ್ಲಿ ಇಬ್ಬರು ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಸಹಿತ ಐವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿಯೇ ಕೆಲವು ದಿವಸಗಳ ಹಿಂದೆ ಇದೇ ವಯಸ್ಸಿನ ವಿದ್ಯಾರ್ಥಿನಿಯನ್ನು ತಂಡವೊಂದು ಅತ್ಯಾಚಾರ ಮಾಡಿತ್ತು. ಇದರ ಬೆನ್ನಿಗೆ ಈ ಹೃದಯ ವಿದ್ರಾವಕವಾದ ಈ ಘಟನೆ ವರದಿಯಾಗಿದೆ.

ಡೆಹ್ರಾಡೂನ್‍ನ ಖಾಸಗಿ ಬೋರ್ಡಿಂಗ್ ಸ್ಕೂಲಿನಲ್ಲಿ ಹನ್ನೆರಡು ವರ್ಷದ ಬಾಲಕನನ್ನು ಹಿರಿಯ ವಿದ್ಯಾರ್ಥಿಗಳು ಥಳಿಸಿ ಕೊಂದು ಹಾಕಿದರು. ಘಟನೆ ನಡೆದ ನಂತರ ಶಾಲೆಯ ಅಧಿಕಾರಿಗಳು ಆಸ್ಪತ್ರೆಗೆ ಕರೆದು ಕೊಂಡು ಹೋದರು. ಆದರೆ ಬಾಲಕ ಮೃತಪಟ್ಟಿರುವುದನ್ನು ವೈದ್ಯರು ಅಲ್ಲಿ ದೃಢಪಡಿಸಿದರು. ಬಳಿಕ ಹೆತ್ತವರಿಗೂ ತಿಳಿಸದೆ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವನ್ನು ಆಡಳಿತ ಮಂಡಲಿ ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದೆ.

ವಾಸು ಯಾದವ್ ಎಂಬ ಹನ್ನೆರಡು ವರ್ಷದ ಬಾಲಕನ್ನು ಬಿಸ್ಕಿಟ್ ಪ್ಯಾಕೆಟ್ ತೆಗೆದಿದ್ದಾನೆ ಎಂದು ಹಿರಿಯ ವಿದ್ಯಾರ್ಥಿಗಳು ಹೊಡೆದಿದ್ದರು. ಘಟನೆಯಲ್ಲಿ ಶಾಲಾಡಳಿತದ ಕಡೆಯಿಂದ ಗಂಭೀರ ನಿರ್ಲಕ್ಷ್ಯವಾಗಿದೆ ಎಂದು ಪೊಲೀಸರು ದೃಢೀಕರಿಸಿದರು. ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ತಡವಾಗಿತ್ತು. ತಂದೆ, ತಾಯಿ ಮತ್ತು ಪೊಲೀಸರಿಗೆ ತಿಳಿಸದೆ ಮೃತದೇಹ ಸಂಸ್ಕಾರ ನಡೆಸಿದ್ದು ಕ್ರಿಮಿನಲ್ ಅಪರಾಧವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದೇವೇಳೆ ಮಕ್ಕಳ ಹಕ್ಕು ಆಯೋಗ ಕೂಡ ಕೇಸು ದಾಖಲಿಸಿಕೊಂಡಿದೆ.