ಹೊಸದಿಲ್ಲಿ, ಮಾ. 28: ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಹುಮತ ದೊರಕುವ ಮೂಲಕ ರಾಹುಲ್ ಗಾಂಧಿ ದೇಶದ ಪ್ರಧಾನಿಯಾದರೆ ಅವರ ಸಚಿವ ಸಂಪುಟದಲ್ಲಿ ವಿತ್ತ ಸಚಿವನಾಗಿ ಕೆಲಸಮಾಡುವ ಆಸಕ್ತಿಯನ್ನು ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ಆರ್ .ರಘುರಾಂ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಚುನಾವಣೆ ಪ್ರಚಾರ ಸಂದರ್ಭದಲ್ಲಿ ರಾಹುಲ್ ಗಾಂಧಿ ಘೋಷಿಸಿರುವ ಕನಿಷ್ಠ ವರಮಾನ ಖಚಿತಪಡಿಸುವ ಯೋಜನೆಯ ಹಿಂದೆ ರಘರಾಮ್ ರಾಜನ್ ಇದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ರಿಸರ್ವ್ ಬ್ಯಾಂಕಿನ ಚುಕ್ಕಾಣಿಯನ್ನು ಬಿಟ್ಟುಕೊಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಮೆರಿಕದಲ್ಲಿ ಪ್ರೊಫೆಸರ್ ಆಗಿರುವ ರಘುರಾಂ ರಾಜನ್ ಕಾಂಗ್ರೆಸ್ ಆಡಳಿತ ಬಂದರೆ ಮತ್ತೆ ಭಾರತಕ್ಕೆ ಮರುಳುವುದಾಗಿ ಹೇಳಿದ್ದಾರೆ. ಎರಡನೆ ಅವಧಿಗೆ ಆರ್ಬಿಐ ಗವರ್ನರ್ ಆಗಿ ಮುಂದುವರಿಯಲು ಬಿಜೆಪಿ ಅವರಿಗೆ ಅವಕಾಶ ಕೊಟ್ಟಿರಲಿಲ್ಲ. ತನಗೆ ಇನ್ನಷ್ಟು ಅವಕಾಶ ಸಿಕ್ಕಿದರೆ ತಾನು ಸಂತೋಷಗೊಳ್ಳುತ್ತೇನೆ ಎಂದು ಅವರು ಈಗಾಗಲೇ ತಿಳಿಸಿದ್ದಾರೆ. ಮಂಗಳವಾರ ಅವರು ತಮ್ಮ ಹೊಸ ಗ್ರಂಥ ದಿ ತ್ರೆಡ್ ಪಿಲ್ಲರ್ ನ ಬಿಡುಗಡೆಯ ವೇಳೆ ತನ್ನ ಇಂಗಿತವನ್ನು ಅವರು ಬಹಿರಂಗಪಡಿಸಿದರು.
ಅವರೀಗ ಅಮೆರಿಕದ ಶಿಕಾಗೊ ಯುನಿವರ್ಸಿಟಿಯಲ್ಲಿ ಫೈನಾನ್ಸ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದೋ ಭಾರತದ ರಾಜಕೀಯಕ್ಕೆ ಅಥವಾ ಸಾರ್ವಜನಿಕ ಸೇವೆಗೆ ಮರಳುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಟಿಎಂಸಿ, ಸಮಜವಾದಿ ಪಾರ್ಟಿ , ಬಿಎಸ್ಪಿ. ಟಿಡಿಪಿ, ಸಹಿತ ಪ್ರತಿಪಕ್ಷಗಳ ಮಹಾಸಖ್ಯ ಅಧಿಕಾರಕ್ಕೆ ಬಂದರೆ ಹಣಕಾಸು ಸಚಿವನಾಗುವ ಸಾಧ್ಯತೆ ಹೆಚ್ಚು ರಘುರಾಂ ಅವರಿಗೆ ಇದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇ. 20ರಷ್ಟು ಅತೀ ಬಡವರಿಗೆ ವರ್ಷದಲ್ಲಿ 73,000 ರೂಪಾಯಿ ಅಥವಾ ತಿಂಗಳಿಗೆ 6000 ರೂಪಾಯಿ ಲಭ್ಯಗೊಳಿಸುವುದಾಗಿ ರಾಹುಲ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ಈ ಯೋಜನೆಯ ಹಿಂದಿರುವ ಬುದ್ಧಿ ಶಕ್ತಿ ರಘುರಾಂ ರಾಜನ್ ಎಂದು ರಾಹುಲ್ ಗಾಂಧಿ ಇಷ್ಟರಲ್ಲೇ ಬಹಿರಂಪಡಿಸಿದ್ದಾರೆ.
ಈ ಸಲದ ಲೋಕಸಭಾ ಚುನಾವಣೆ ಭಾರತಕ್ಕೆ ಸಂಬಂಧಿಸಿದಂತೆ ಮಹತ್ವದ ಚುನಾವಣೆಯಾಗಿದ್ದು ಹೊಸ ಆರ್ಥಿಕ ಸುಧಾರಣೆಗಳು ಅತ್ಯವಶ್ಯಕವಾಗಿದೆ ಎಂದು ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ಹೇಳಿದರು. ಅವರು ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದಾಗ ಹಲವು ಕ್ರಾಂತಿಕಾರಿ ಸುಧಾರಣೆಗಳನ್ನು ತಂದಿದ್ದರು.












