ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿಗರ ಲಗ್ಗೆ.

0
2025

ಮಡಿಕೇರಿ: ಕ್ರಿಸ್ಮಸ್,ಹಾಗೂ ಹೊಸ ವರ್ಷದ ಸಂಭ್ರಮವನ್ನು ಆಚರಿಸಲು ದೇಶದ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ಮಡಿಕೇರಿಯಲ್ಲಿ ಠಿಕಾಣಿ ಹೂಡಿದ್ದಾರೆ.

ಕರ್ನಾಟಕದ ಕಾಶ್ಮೀರವೆಂದೇ ಪ್ರಖ್ಯಾತಗೊಂಡಿರುವ ಕೊಡಗು ಜಿಲ್ಲೆಯು ಕಳೆದ ಸುಮಾರು 12 ವರ್ಷಗಳಿಂದೀಚೆಗೆ ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟಿರುವುದರಿಂದ ಇಲ್ಲಿನ ವ್ಯಾಪಾರ ವಹಿವಾಟುಗಳಲ್ಲಿ ಬಹಳಷ್ಟು ಹೆಚ್ಚಳ ಕಂಡಿದೆ. ಅದರಲ್ಲೂ ವಿಶೇಷವಾಗಿ ಹೋಟೆಲ್,ಹಾಗೂ ಉಪಹಾರ ಮಂದಿರಗಳು ತನ್ನ ವ್ಯಾಪಾರಗಳನ್ನು ವೃದ್ಧಿಸಿಕೊಂಡಿದೆ. ಮಾತ್ರವಲ್ಲ ಹಿಂದೆ ಬೆರಳೆಣಿಕೆಯಷ್ಟಿದ್ಧ ಲಾಡ್ಜ್, ರೆಸ್ಟೋರೆಂಟ್ ಗಳು ಇದೀಗ ಹೆಜ್ಜೆ,ಹೆಜ್ಜೆಗೂ ತಲೆ ಎತ್ತುತ್ತಿವೆ.
ಅತಿಥಿ ಸತ್ಕಾರದಲ್ಲಿ ಮೊದಲೇ ಮುಂಚೂಣಿಯಲ್ಲಿರುವ ಕೊಡವ ಸಮುದಾಯ ಅದಕ್ಕಾಗಿಯೇ ನಿರ್ಮಿಸಿದ್ದ ಅತಿಥಿ ಗೃಹಗಳನ್ನು ಪ್ರವಾಸಿಗರಿಗೆ ತಂಗಲು ಹೋಂಸ್ಟೇ”ಯಾಗಿ ಮಾರ್ಪಡಿಸಲಾಗಿದೆ.
ಪ್ರವಾಸಿಗರ ಮುಖ್ಯ ಆಕರ್ಷಣೆಯ ತಾಣ ರಾಜಾಸೀಟು, ಅಬ್ಬೇಫಾಲ್ಸ್, ಮಡಿಕೇರಿಯ ಅರಮನೆ ಹಾಗೂ ಇತ್ತೀಚೆಗೆ ಮುಖ್ಯ ಆಕರ್ಷಣೆಯಾದ ಮಾಂದಲ್ ಪಟ್ಟಿ ಇವು ಸುಮಾರು ಸಮುದ್ರ ಮಟ್ಟದಿಂದ ಸುಮಾರು ಏಳು ಸಾವಿರ ಅಡಿಯ ಎತ್ತರದ ವಿಶಾಲವಾದ ಸುಂದರ ಪೃಕೃತಿಯ ಶಿಖರ.
ನಂತರ ತಲಕಾವೇರಿ, ಭಾಗಮಂಡಲ, ಭ್ರಹ್ಮಗಿರಿ ಬೆಟ್ಟ ,ಕುಶಾಲನಗರದ ಹಾರಂಗಿ ಗೋಲ್ಡೆನ್ ಟೆಂಪಲ್ ಮಣಿದರೊಸ್ ಧಾಮ ಹಾಗೂ ದುಭಾರೆ ಫಾರೆಸ್ಟ್, ಹೂಗೆ ಎಲ್ಲಾ ತಾಣಗಳಲ್ಲಿ ಹೆಚ್ಚಿನ ಜನಸಂಧಣಿಯನ್ನು ಕಾಣ ಸಿಗುತ್ತದೆ.