2 ಜಿ ಯಾರು ರಚಿಸಿದ ಚಿತ್ರಕತೆ?

0
1547

ವರ್ಷದಲ್ಲಿ 2 ಕೋಟಿ ಹೊಸ ಉದ್ಯೋಗ ಸ್ರಷ್ಟಿ, 100 ದಿನದೊಳಗೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ,ನೋಟು ಹಗರಣ, ಅಚ್ಛೇ ದಿನ್… ಇತ್ಯಾದಿ ಇತ್ಯಾದಿ ಸುಳ್ಳುಗಳಂತೆಯೇ 2ಜಿ ಸ್ಪೆಕ್ಟ್ರಂ ಹಗರಣವೂ ಕಾಂಗ್ರೆಸ್ ನ ಹಿತಶತ್ರುಗಳು ಮತ್ತು ಬಿಜೆಪಿ ಜೊತೆಗೂಡಿ ರಚಿಸಿ ಬಿಡುಗಡೆಗೊಳಿಸಿದ ಸುಳ್ಳು ಆಗಿರಬಹುದೇ? ಇದೀಗ ಆದರ್ಶ್ ಹಗರಣದಿಂದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಚೌಹಾಣ್ ಕೂಡ ಖುಲಾಸೆಗೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸನ್ನು ನೇಣುಗಂಭಕ್ಕೆ ಕೊಂಡೊಯ್ದದ್ದೇ ಈ ಹಗರಣಗಳು. ಮನ್ ಮೋಹನ್ ಸಿಂಗ್ ರ ವರ್ಚಸ್ಸಿಗೆ ಧಕ್ಕೆ ತಂದದ್ದೂ ಇವುಗಳೇ. ಮಹಾಲೇಖಪಾಲಕರಾದ ವಿನೋದ್ ರಾಯ್ ರು ಯಾರ ಅಣತಿಯಂತೆ 2 ಜಿ ಹಗರಣವನ್ನು ಅಂದಾಜಿಸಿದ್ದರು? ಏ ಸಿ ರೂಮಲ್ಲಿ ಕೂತು ಅವರು ಬಿಜೆಪಿಗಾಗಿ ಕತೆ ಕಟ್ಟಿದರೇ? ನೋಟು ಅಮಾನ್ಯವು ಸ್ಪೆಕ್ಟ್ರಂ ನಲ್ಲಿ ಅಂದಾಜಿಸಲಾದ ಮೊತ್ತಕ್ಕಿಂತ ದೊಡ್ಡ ಹಗರಣ ಎಂದು ಹೇಳಲಾಗುತ್ತದೆ. ಈಗ ಮಹಾಲೇಖಪಾಲಕರು ಇಲ್ಲವೇ? ಮಾಧ್ಯಮಗಳೇಕೆ ದೇಶಕ್ಕೆ “ತುಂಬಲಾರದ ನಷ್ಟ”ವಾಗಿಯೂ ಸುಮ್ಮನಿವೆ?

ಏ ಕೆ ಕುಕ್ಕಿಲ