ಎಲ್ಲ ಅನಿಶ್ಚಿತತೆಗಳಿಗೆ ತೆರೆ ಬಿತ್ತು; ಕೊನೆಗೂ ರಾಹುಲ್ ಗಾಂಧಿ ವಯನಾಡಿನಿಂದಲೇ ಸ್ಪರ್ಧೆ
ಹೊಸದಿಲ್ಲಿ,ಮಾ.31: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುವ ವಿಚಾರ ಅಂತಿಮಗೊಂಡಿದೆ. ವಯನಾಡ್ ಲೋಕಸಭಾ ಕ್ಷೇತ್ರದಿಂದ ರಾಹುಲ್ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂದು ಎ.ಕೆ ಆಂಟನಿ ದಿಲ್ಲಿಯಲ್ಲಿ ಘೋಷಿಸಿದರು. ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ರಾಹುಲ್ ದಕ್ಷಿಣ ಭಾರತದ ಒಂದು ಲೋಕಸಭಾಕ್ಷೇತ್ರದಿಂದ ಸ್ಪಧಿಸಲು ತೀರ್ಮಾನಿಸಿದರೆಂದು ಆಂಟನಿ ಹೇಳಿದರು.
ತಮಿಳ್ನಾಡು, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಕಾರ್ಯಕರ್ತರÀ ಬೇಡಿಕೆಯಾಗಿತ್ತು. ಅಂತಿಮವಾಗಿ ಕರ್ನಾಟಕ, ತಮಿಳ್ನಾಡುಗಳೊಂದಿಗೆ ಗಡಿ ಹಂಚಿಕೊಂಡಿರುವ ಕೇರಳದ ವಯನಾಡಿನಿಂದ ಸ್ಪರ್ಧಿಸಲು ರಾಹುಲ್ ನಿರ್ಧರಿಸಿದರು ಎಂದು ಆಂಟನಿ ಹೇಳಿದರು.
ರಾಹುಲ್ ಅಮೇಠಿಯಿಂದಲೂ ಸ್ಪರ್ಧಿಸಲಿದ್ದಾರೆ. ಈ ಹಿಂದೆಯೇ ಅಮೇಠಿಯನ್ನು ರಾಹುಲ್ ತನ್ನ ಕರ್ಮ ಭೂಮಿಯೇಂದು ಸ್ಪಷ್ಟಪಡಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣ್ದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು.












