ರಾಹುಲ್ ವಯನಾಡಿಗೆ ಬರಲಿ, ತೊಂದರೆಯಿಲ್ಲ – ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

0
1021

ತಿರುವನಂತಪುರಂ,ಮಾ.31: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುವುದರಿಂದ ನಮಗೆ ತೊಂದರೆಗಳಿಲ್ಲ. ರಾಹುಲ್‍ರನ್ನು ಎದುರಿಸುವ ಸಂಘಟನಾ ಶಕ್ತಿ ಎಡಪಕ್ಷಗಳಿಗಿವೆ ಎಂದು ಪಿಣರಾಯಿ ವಿಜಯನ್ ಕಾಂಗ್ರೆಸ್‍ಗೆ ಟಾಂಗು ನೀಡಿದ್ದಾರೆ. ಬಿಜೆಪಿಯೊಂದಿಗೆ ಕಾಂಗ್ರೆಸ್ ಹೋರಾಡುವುದಾಗಿದ್ದರೆ ರಾಹುಲ್ ಇಲ್ಲಿ ಸ್ಪರ್ಧಿಸಬೇಕಾದ್ದಲ್ಲ. ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ಸ್ಪರ್ಧೆಯಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು.

20 ಲೋಕಸಭಾ ಸೀಟುಗಳಲ್ಲಿ ರಾಹುಲ್ ಕೂಡ ಒಬ್ಬರು ಎಂದು ನಾವು ಪರಿಗಣಿಸುತ್ತೇವೆ. ರಾಹುಲ್ ವಯನಾಡಿಗೆ ಬರುವುದರಿಂದ ಕೇಂದ್ರದಲ್ಲಿ ಒಂದು ಬದಲಿ ಸರಕಾರ ರಚಿಸಲು ಅಡ್ಡಿಯಾಗಬಹುದೇ ಎನ್ನುವುದನ್ನು ಈಗ ಹೇಳಲು ಸಾಧ್ಯವಿಲ್ಲ. ಕೇರಳದಿಂದ ರಾಹುಲ್ ಗಾಂಧಿ ಸ್ಪರ್ಧೆ ತಪ್ಪು ಸಂದೇಶವನ್ನು ನೀಡುತ್ತದೆ. ಕೇರಳದ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಲೀಗ್, ಬಿಜೆಪಿ ಸಖ್ಯಕ್ಕೆ ಯತ್ನ ನಡೆಯುತ್ತಿದೆ ಎಂದು ಪಿಣರಾಯಿ ವಿಜಯನ್ ಆರೋಪಿಸಿದರು.