ಕೊಲ್ಲಂ,ಎ.1: ಇಸ್ತ್ರಿ ಅಂಗಡಿಯೊಂದರಲ್ಲಿ ಬೆಂಕಿ ಅನಾಹುತ ನಡೆದಿದ್ದು, ಅಂಗಡಿಯೊಳಗೆ ನಿದ್ದೆ ಮಾಡುತ್ತಿದ್ದ ಅಂಗಡಿ ಮಾಲಕ ಪುನಲೂರಿನ ಐಸಾಕ್(58) ಸಂಪೂರ್ಣ ಸಜೀವ ದಹನವಾದ ಘಟನೆ ಪುನಲೂರ್ ಚೆಮ್ಮಂದೂರಿನಲ್ಲಿ ನಡೆದಿದೆ. ಸೋಮವಾರ ಮುಂಜಾನೆ ಐದು ಗಂಟೆಗೆ ಅಗ್ನಿ ಅನಾಹುತ ಸಂಭವಿಸಿದ್ದು ಅನಾಹುತಕ್ಕೆ ಶಾರ್ಟ್ ಸರ್ಕಿಟ್ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಇದೇ, ವೇಳೆ ಹಾಸಿಗೆಯ ಸಮೀಪದಲ್ಲಿ ಇಟ್ಟಿದ್ದ ಸೊಳ್ಳೆ ಬತ್ತಿಯಿಂದ ಬೆಂಕಿ ಹಿಡಿದಿರುವ ಸಾಧ್ಯತೆ ಇದೆ ಎಂದು ಕೂಡಾ ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕಾಗಮಿಸಿದ ಪುನಲೂರ್ ಪೊಲೀಸರು ಮತ್ತು ಫಾರೆನ್ಸಿಕ್ ತಜ್ಞರು ಪರಿಶೀಲನೆ ನಡೆಸಿದ್ದಾರೆ.












