ಮಕ್ಕಳ ಅಶ್ಲೀಲ ವೀಡಿಯೊ ಪ್ರಚಾರ ಮಾಡಿದ ಯುವಕನ ಬಂಧನ

0
1240

ಪತ್ತನಂತಿಟ್ಟ,ಎ.1: ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಅಶ್ಲೀಲ ವೀಡಿಯೊವನ್ನು ಸಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಿದ ಯುವಕನ್ನು ಬಂಧಿಸಲಾಗಿದೆ. ಕೇರಳದ ರಾನ್ನಿ ಮಂದಿರಂಪಡಿಯ ವಿಷ್ಣು(20) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಜಿಲ್ಲಾ ಪೊಲೀಸ್ ಸೈಬರ್ ಸೆಲ್‍ನ ನಿರಂತರ ನಿರೀಕ್ಷಿಸಿತ್ತು. ನಿರಂತರ ಅಶ್ಲೀಲ ಸೈಟಿಗೆ ಭೇಟಿ ನೀಡುತ್ತಿದ್ದ ಈತ ಮಕ್ಕಳ ವೀಡಿಯೊಗಳನ್ನು ಮಾತ್ರ ವೀಕ್ಷಿಸುತ್ತಿದ್ದ. ನಂತರ ಅದನ್ನು ಫೋನ್‍ಗೆ ಡೌನ್‍ಲೋಡ್ ಮಾಡಿ ವಾಟ್ಸ್‍ಆ್ಯಪ್ ಸಹಿತ ಸಾಮಾಜಿಕ ಮಾಧ್ಯಮಗಳಲ್ಲಿ ಈತ ಪ್ರಚಾರ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಅಪ್ರಾಪ್ತ ವಯಸ್ಸಿನ ಮಕ್ಕಳ ಅಶ್ಲೀಲ ವೀಡಿಯೊ ನೋಡುವವರು, ಡೌನ್‍ಲೋಡ್ ಮಾಡುವವರು ಮತ್ತು ಪ್ರಚಾರ ಮಾಡುವವರ ಕುರಿತು ಸೈಬರ್ ಪೊಲೀಸರು ನಿಗಾ ಇರಿಸಿದ್ದು ಇದೇ ವೇಳೆ ವಿಷ್ಣು ಪೊಲೀಸ್ ಬಲೆಗೆ ಬಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಯಾರೂ ನೋಡುವುದಿಲ್ಲ ಎಂದು ತಿಳಿದುಕೊಂಡು ಹೆಚ್ಚಿನವರು ಇಂತಹ ವೀಡಿಯೊಗಳನ್ನು ನೋಡುತ್ತಾರೆ. ಐದುವರ್ಷದವರೆಗೆ ಜೈಳು ಶಿಕ್ಷೆ ಲಭಿಸುವ ಜಾಮೀನು ರಹಿತ ಅಪರಾಧ ಇದು. ಅಶ್ಲೀಲ ವೀಡಿಯೊ, ದೃಶ್ಯಗಳು ವಿಷ್ಣುವಿನ ಫೋನ್‍ನಲ್ಲಿ ಪತ್ತೆಯಾಗಿದ್ದರಿಂದ ಫೋನ್‍ನ್ನು ಕೂಡ ಪರಿಶೀಲನೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರಾದ ಜಿ. ಜಯದೇವ್ ತಿಳಿಸಿದ್ದಾರೆ.