ಅಂಡಮಾನ್- ನಿಕೋಬಾರ್: 2 ಗಂಟೆಗಳಲ್ಲಿ 9 ಬಾರಿ ಭೂಕಂಪನ

0
1333

ಹೊಸದಿಲ್ಲಿ,ಎ.1: ಅಂಡಮಾನ್- ನಿಕೋಬಾರ್ ದ್ವೀಪಗಳಲ್ಲಿ ಎರಡು ಗಂಟೆಗಳಲ್ಲಿ ಒಂಬತ್ತು ಬಾರಿ ಭೂಕಂಪನ ನಡೆದಿದೆ ಎಂದು ವರದಿಯಾಗಿದೆ. ಸೋಮವಾರ ಬೆಳಗ್ಗೆ 5:14ಕ್ಕೆ 4.9 ತೀವ್ರತೆಯ ಮೊದಲ ಭೂಕಂಪನ ನಡೆಯಿತು. ನಂತರ ಎಂಟು ಬಾರಿ ಭೂಕಂಪನ ಆಗಿದೆ.

ರಿಕ್ಟರ್ ಮಾಪಕದಲ್ಲಿ 4.7ರಿಂದ 5.2 ರಷ್ಟು ತೀವ್ರತೆಯಲ್ಲಿ ಭೂಕಂಪನಗಳಾದವು ಎಂದು ನ್ಯಾಶನಲ್ ಸರ್ವೇ ಫಾರ್ ಸಿಸ್ಮೋಲಜಿ ವರದಿ ಮಾಡಿದೆ. ಬೆಳಗ್ಗೆ 6:54ಕ್ಕೆ 5.2 ತೀವ್ರತೆಯ ಭೂಕಂಪನ ನಡೆದಿದೆ.

ಅಂಡಮಾನ್-ನಿಕೋಬಾರ್ ದ್ವೀಪಗಳು ಭೂಕಂಪನ ಸಾಧ್ಯತೆಯ ವಲಯದಲ್ಲಿವೆ. ಮೂರಕ್ಕಿಂತ ಹೆಚ್ಚು ಸಲ ಒಂದೇ ದಿವಸದಲ್ಲಿ ಭೂಕಂಪನ ಆಗುವುದು ಅಸಾಮಾನ್ಯವಾಗಿದೆ ಎಂದು ತಜ್ಞರು ಬೆಟ್ಟು ಮಾಡಿದ್ದಾರೆ.