ದೂತವಾಸ ಜೆರುಸಲೇಂಗೆ ಸ್ಥಳಾಂತರಿಸದಿರಲು ಬ್ರಝಿಲ್ ನಿರ್ಧಾರ

0
1139

ಬ್ರಝೀಲಿಯ, ಎ.1: ಇಸ್ರೇಲಿನ ಬ್ರಝಿಲ್ ದೂತವಾಸವನ್ನು ಟೆಲ್‍ಅವೀವ್‍ನಿಂದ ಜೆರುಸಲೇಂಗೆ ವಗಾರ್ಯಯಿಸುವ ನಿರ್ಧಾರದಿಂದ ಬ್ರೆಝಿಲ್ ಹಿಂದೆ ಸರಿದಿದೆ. ಬ್ರಝಿಲ್ ಅಧ್ಯಕ್ಷ ಜೇರ್ ಬೊಲ್ಸಾರನೊರನ್ನು ಉದ್ಧರಿಸಿ ಮಾನ್ ನ್ಯೂಸ್ ವರದಿ ಮಾಡಿದೆ. ನಮ್ಮ ದೇಶದ ದೂತವಾಸವನ್ನು ಜೆರುಸಲೇಂಗೆ ಸ್ಥಾನಾಂತರಿಸುವುದಿಲ್ಲ ಎಂದು ಅಧ್ಯಕ್ಷರು ಹೇಳಿರುವುದಾಗಿ ವರದಿ ತಿಳಿಸಿದೆ.

ಆದರೆ, ಪಶ್ಚಿಮ ಜೆರುಸಲೇಂನಲ್ಲಿ ಒಂದು ಬಿಸಿನೆಸ್ ಕಚೇರಿ ತೆರೆಯಲು ಬ್ರಝಿಲ್ ನಿರ್ಧರಿಸಿದೆ. ಬೊಲ್ಸರನೊ ಎರಡು ದಿವಸದ ಸಂದರ್ಶನಕ್ಕೆ ಇಸ್ರೇಲಿಗೆ ಭೇಟಿ ನೀಡಲಿದ್ದು ಇದೇ ಸಂದರ್ಭದಲ್ಲಿ ದೂತವಾಸ ಸ್ಥಳಾಂತರದ ಕುರಿತು ಅವರು ಅಭಿಪ್ರಾಯ ಪ್ರಕಟಿಸಿದ್ದಾರೆ. 2018 ಜನವರಿಯಲ್ಲಿ ಅಮೆರಿಕ ತನ್ನ ದೂತವಾಸವನ್ನು ಜೆರುಸಲೇಂಗೆ ಸ್ಥಳಾಂತರಿಸಿತ್ತು. ಅದರ ಬೆನ್ನಿಗೆ ಬ್ರಝಿಲ್ ದೂತವಾಸವನ್ನು ಜೆರುಸಲೇಂಗೆ ವರ್ಗಾಯಿಸಲಾಗುವುದು ಎಂದು ಹೇಳಿಕೊಂಡಿತ್ತು. ಆದರೆ ಬ್ರಝಿಲ್ ನಿರ್ಧಾರಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.