ಅನಿವಾಸಿ ಭಾರತೀಯರ ನೆರವಿನೊಂದಿಗೆ ಅಲ್ ಐನ್ ದಫನ ಭೂಮಿಯಲ್ಲಿ ಪಿ.ಬಿ.ಅಬ್ದುಲ್ ರಝಾಕ್ ಅವರ ಅಂತ್ಯ ಸಂಸ್ಕಾರ

0
558

ಸನ್ಮಾರ್ಗ ವಾರ್ತೆ

ಅಲ್ ವಫಾ ಚಾರಿಟೇಬಲ್ ಟ್ರಸ್ಟ್’ನ ಉಪಾಧ್ಯಕ್ಷರು, ಜಮೀಯತುಲ್ ಫಲಾಹ್ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷರು, ಜಮೀಯತುಲ್ ಫಲಾಹ್ ಸಿಟಿ ಕಾರ್ಪೋರೇಷನ್ ಇದರ ಅಧ್ಯಕ್ಷರು ಮತ್ತು ಜನಾನುರಾಗಿ ಹಾಗೂ ಸಮಾಜ ಸೇವಕರೂ ಆಗಿದ್ದ ಪಿ.ಬಿ. ಅಬ್ದುಲ್ ರಝಾಕ್ ಅವರು ದಿನಾಂಕ 14-11-2023 ರಂದು ದುಬೈಯ ಆಸ್ಟರ್ ಆಸ್ಪತ್ರೆಯಲ್ಲಿ  ನಿಧನರಾಗಿದ್ದರು.

ಅವರ ಪಾರ್ಥಿವ ಶರೀರವನ್ನು ನಿನ್ನೆ 15 -11- 23 ರಂದು ಸಂಜೆ ಅಲ್ ಐನ್ ನ ದಫನ ಭೂಮಿಯಲ್ಲಿ ದಫನ ಕ್ರಿಯೆ ನಡೆದಿದೆ ಎಂದು ಅವರ ಪುತ್ರ ಝೀಶಾನ್ ಅಲಿ ತಿಳಿಸಿದ್ದಾರೆ. ಮತ್ತು ಅದರ ದಾಖಲೆ ಪತ್ರಗಳನ್ನು ಸರಿಪಡಿಸುವಲ್ಲಿ ಮುಬೀನ್ ಉಡುಪಿ, ಕೆ.ಸಿ.ಎಫ್ ನ ಸಮದ್ ಬಿರಾಲಿ ಮತ್ತು ಝಹೀರ್ ಬೈಕಂಪಾಡಿ ಶ್ರಮ ವಹಿಸಿದ್ದರು.