ಸನ್ಮಾರ್ಗ ವಾರ್ತೆ
ಅಲ್ ವಫಾ ಚಾರಿಟೇಬಲ್ ಟ್ರಸ್ಟ್’ನ ಉಪಾಧ್ಯಕ್ಷರು, ಜಮೀಯತುಲ್ ಫಲಾಹ್ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷರು, ಜಮೀಯತುಲ್ ಫಲಾಹ್ ಸಿಟಿ ಕಾರ್ಪೋರೇಷನ್ ಇದರ ಅಧ್ಯಕ್ಷರು ಮತ್ತು ಜನಾನುರಾಗಿ ಹಾಗೂ ಸಮಾಜ ಸೇವಕರೂ ಆಗಿದ್ದ ಪಿ.ಬಿ. ಅಬ್ದುಲ್ ರಝಾಕ್ ಅವರು ದಿನಾಂಕ 14-11-2023 ರಂದು ದುಬೈಯ ಆಸ್ಟರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಅವರ ಪಾರ್ಥಿವ ಶರೀರವನ್ನು ನಿನ್ನೆ 15 -11- 23 ರಂದು ಸಂಜೆ ಅಲ್ ಐನ್ ನ ದಫನ ಭೂಮಿಯಲ್ಲಿ ದಫನ ಕ್ರಿಯೆ ನಡೆದಿದೆ ಎಂದು ಅವರ ಪುತ್ರ ಝೀಶಾನ್ ಅಲಿ ತಿಳಿಸಿದ್ದಾರೆ. ಮತ್ತು ಅದರ ದಾಖಲೆ ಪತ್ರಗಳನ್ನು ಸರಿಪಡಿಸುವಲ್ಲಿ ಮುಬೀನ್ ಉಡುಪಿ, ಕೆ.ಸಿ.ಎಫ್ ನ ಸಮದ್ ಬಿರಾಲಿ ಮತ್ತು ಝಹೀರ್ ಬೈಕಂಪಾಡಿ ಶ್ರಮ ವಹಿಸಿದ್ದರು.












