ಕುವೈಟ್: ತೀರ್ಪು ಜಾರಿಗೆ ನಿರಾಕರಿಸಿದ ಅಧಿಕಾರಿ ವಿರುದ್ಧ ಕ್ರಮ

0
1013

ಸನ್ಮಾರ್ಗ ವಾರ್ತೆ

ಕುವೈಟ್ ಸಿಟಿ, ನ.16: ಜ್ಯುಡಿಶಿಯಲ್ ತೀರ್ಪನ್ನು ಜಾರಿ ಮಾಡಬೇಕಾಗಿದ್ದ ಅಧಿಕಾರಿಯೊಬ್ಬರು ಜಾರಿಗೊಳಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೆಲಸದಿಂದ ವಜಾಗೊಂಡಿದ್ದಾರೆ. ನ್ಯಾಯಾಲಯದ ಆದೇಶವನ್ನು ಜಾರಿಗೆ ತರುವಲ್ಲಿ ಈ ಅಧಿಕಾರಿ ನಿರಾಕರಿಸಿದ್ದು ಅವರು ಕೆಲಸ ಕಳೆದುಕೊಳ್ಳುವಂತೆ ಮಾಡಿದೆ.

ಕೋರ್ಟಿನ ತೀರ್ಪನ್ನು ಜಾರಿಗೊಳಿಸಲು ಕುವೈಟ್ ಔಖಾಫ್ ಸೆಕ್ರಟರಿ ಜನರಲ್ ನಿರಾಕರಿಸಿದ ನಂತರ ಜಡ್ಜ್ ಅಬ್ದುಲ್ ರಹ್ಮಾನ್ ಅಲ್ ಹುರೈಜಿ ಅಧ್ಯಕ್ಷತೆಯ ಕೋರ್ಟು  ಔಖಾಫ್ ಸೆಕ್ರಟರಿಯನ್ನು ಕೆಲಸದಿಂದ ವಜಾಗೊಳಿಸುವಂತೆ ತೀರ್ಪು ನೀಡಿದೆ. 

ಕುವೈಟ್ ಸ್ವದೇಶಿ ಪ್ರಜೆಯ ಪರ ಪ್ರಕರಣವೊಂದರಲ್ಲಿ  ಕೋರ್ಟು ನೀಡಿದ ತೀರ್ಪನ್ನು ಜಾರಿಗೊಳಿಸದ್ದರಿಂದ ಕೋರ್ಟು ಮಧ್ಯಪ್ರವೇಶಿಸಿ ಔಕಾಫ್ ಸೆಕ್ರಟರಿಯನ್ನು ಕೆಲಸದಿಂದ ಹೊರಹಾಕಿದೆ.