ವಯನಾಡಿನಿಂದ ರಾಹುಲ್ ಸ್ಪರ್ಧಿಸಬಾರದೆಂದು ತಾನು ಹೇಳಿಲ್ಲ- ಸೀತರಾಂ ಯೆಚೂರಿ

0
1348

ಪತ್ತನಂತಿಟ್ಟ,ಎ. 2: ರಾಹುಲ್ ಗಾಂಧಿಯನ್ನು ವಯನಾಡಿನಿಂದ ಸ್ಪರ್ಧಿಸಬಾರದೆಂದು ಹೇಳಿಲ್ಲ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ. ಕೇರಳದಲ್ಲಿ ಎಡ ಪಕ್ಷದ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಧ್ಯಕ್ಷರ ಸವಾಲನ್ನು ಸ್ವೀಕರಿಸಿದ್ದೇವೆ ಎಂದು ಎಲ್‍ಡಿಎಫ್ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು. ಬೇರೆ ಪಾರ್ಟಿಯ ನಾಯಕರು ಸ್ಪರ್ಧಿಸುವ ವಿಚಾರದಲ್ಲಿ ಬೇರೆ ಕಡೆಹೋಗಿ ಗುಟ್ಟಾಗಿ ಮಾತಾಡುವ ಅಭ್ಯಾಸ ಸಿಪಿಎಂಗೆ ಇಲ್ಲ. ಆದರೂ ಹೇಳುವುದನ್ನು ಬಹಿರಂಗವಾಗಿಯೇ ಹೇಳುತ್ತೇವೆ ಎಂದು ಸೀತಾರಾಂ ಯೆಚೂರಿ ಹೇಳಿದರು.

ಬಿಜೆಪಿಯನ್ನು ಸೋಲಿಸುವುದು, ಎಡ ಪಕ್ಷದ ಸದಸ್ಯ ಬಲ ಲೋಕಸಭೆಯಲ್ಲಿ ಹೆಚ್ಚಿಸುವುದು, ಚುನಾವಣೆಯ ನಂತರ ಕೇಂದ್ರದಲ್ಲಿ ಜಾತ್ಯತೀತ ಸರಕಾರ ಅಧಿಕಾರಕ್ಕೆ ಬರುವಂತೆ ಆಗಬೇಕು ಎನ್ನುವ ಮೂರು ಗುರಿಗಳನ್ನಿಟ್ಟು ಎಡಪಕ್ಷಗಳು ಕೆಲಸ ಮಾಡುತ್ತಿವೆ. ಈ ನಡುವೆ ಕಾಂಗ್ರೆಸ್ ಅಧ್ಯಕ್ಷರು ಕೇರಳದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಬಂದಿದೆ. ರಾಹುಲ್ ಗಾಂಧಿಗೆ ಎಲ್ಲಿಂದಲೂ ಸ್ಪರ್ಧಿಸುವ ಸ್ವಾತಂತ್ರ್ಯ ಇದೆ. ಅದರೆ, ಎಲ್‍ಡಿಎಫ್‍ನ್ನು ಸೋಲಿಸುವ ಕೆಲಸವನ್ನು ರಾಷ್ಟ್ರ ರಾಜಕೀಯದಲ್ಲಿ ಅವರು ಮಾಡಬೇಕಾಗಿದೆಯೇ?. ಬಿಜೆಪಿಯನ್ನಲ್ಲ ಕೇರಳದಲ್ಲಿ ಎಲ್‍ಡಿಎಫ್‍ನೊಂದಿಗೆ ಹೋರಾಟ ನಡೆಯುತ್ತದೆ. ಇದರಿಂದ ಏನು ಪ್ರಯೋಜನ ಇದೆ ಎಂದು ಯೆಚೂರಿ ಪ್ರಶ್ನಿಸಿದರು.