ಸನ್ಮಾರ್ಗ ವಾರ್ತೆ
ಲಕ್ನೊ. ನ.25: ಹಲಾಲ್ ಮಾಂಸ ಉತ್ಪನ್ನ ನಿಷೇಧದ ಬೆನ್ನಿಗೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ವೆಜ್ ಡೇ ಘೋಷಿಸಿದ್ದು, ಸಾಧು ತನ್ವರ್ ದಾಸ್ ಲೈಲಾರಾಂ ವಾಸ್ವಾನಿಯ ಜನ್ಮದಿನ ವಾರ್ಷಿಕ ಹಿನ್ನೆಲೆಯಲ್ಲಿ ಶನಿವಾರ ನೊ ನಾನ್ ವೆಜ್ ಡೇ ಆಚರಿಸಲಾಯಿತು.
ಈ ಹಿನ್ನೆಲೆಯಲ್ಲಿ ಕಸಾಯಿ ಖಾನೆಗಳು ಮತ್ತು ಮಾಂಸದಂಗಡಿಗಳನ್ನು ಮುಚ್ಚಿಡಲು ಸರಕಾರ ಆದೇಶ ಹೊರಡಿಸಿತ್ತು.
ನವೆಂಬರ್ 25 ರಂದು ಭಾರತದ ವಿದ್ಯಾಭ್ಯಾಸ ತಜ್ಞರಾದ ಸಾಧು ತನ್ವರ್ ದಾಸ್ ಲೀಲಾರಾಂ ವಾಸ್ವಾನಿ ಅವರ ಜನ್ಮ ದಿನ. ಆದ್ದರಿಂದ ಇಂದು ಮಾಂಸ ರಹಿತ ದಿನವಾಗಿ ಆಚರಿಸಲಾಗುತ್ತಿದೆ. ಸಸ್ಯಾಹಾರವನ್ನು ಪ್ರೋತ್ಸಾಹಿಸುವುದಕ್ಕೆ ಶ್ರಮಿಸಿದ ವ್ಯಕ್ತಿಯಾಗಿದ್ದರು ಸಾಧು ತನ್ವರ್ ದಾಸ್. ಆದುದರಿಂದ ಅವರ ಜನ್ಮದಿನದ ನೆನಪಿನಲ್ಲಿ ಉತ್ತರ ಪ್ರದೇಶ ಸರಕಾರ ಈ ದಿನ ಮಾಂಸ ರಹಿತ ದಿನವಾಗಿ ಆಚರಿಸಲು ನಿರ್ಧರಸಿತು.
ಶನಿವಾರ ಮಾಂಸ ಮಾರಾಟದ ಅಂಗಡಿಗಳನ್ನು ತೆರೆಯಬಾರದೆಂದು ಸರಕಾರ ಸುತ್ತೋಲೆಯ ಮೂಲಕ ಎಚ್ಚರಿಕೆ ನೀಡಿತ್ತು. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರ ಹಲಾಲ್ ಆಹಾರದ ವಿರುದ್ಧ ಕ್ರಮ ಕೈಗೊಂಡದ್ದು ಹೆಚ್ಚು ವಿವಾದವಾಗಿತ್ತು.












