ರಾಹುಲ್ ಗಾಂಧಿ ಫ್ಯೂಸ್ ಹೋದ ಟ್ಯೂಬ್ ಲೈಟ್; ಬಿಜೆಪಿ ವ್ಯಂಗ್ಯ

0
387

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ನ. 25: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫ್ಯೂಸ್ ಹೋದ ಟ್ಯೂಬ್ ಲೈಟ್ ಎಂದು ಬಿಜೆಪಿ ಚಿತ್ರವೊಂದು ಎಕ್ಸ್ ಗೆ ಪೋಸ್ಟ್ ಮಾಡಿ ವ್ಯಂಗ ಮಾಡಿದೆ.

ಮೇಡ್ ಇನ್ ಚೈನ ಎಂದು ಪೋಸ್ಟ್‌ ನಲ್ಲಿ ಬರೆದಿದೆ. ಕಾಂಗ್ರೆಸ್‍ನ ರಾಹುಲ್ ಗಾಂಧಿ ಒಂದು ಟ್ಯೂಬ್ ಲೈಟ್ ಎಂದು ಕ್ಯಾಪ್ಶನ್ ಕೊಡಲಾಗಿದೆ. ಎ 2020ರಲ್ಲಿ ಮೋದಿ ರಾಹುಲ್‍ರನ್ನು ಟ್ಯೂಬ್ ಲೈಟ್ ಎಂದು ಕರೆದು ತಮಾಷೆ ಮಾಡಿದ್ದರು.

ವಿಶ್ವಕಪ್ ಫೈನಲ್‍ನಲ್ಲಿ ಭಾರತ ಸೋಲಿಗೆ ಸಂಬಂಧಿಸಿ ರಾಹುಲ್ ಗಾಂಧಿ ಮೋದಿಯನ್ನು ಅಪಶಕುನ ಎಂದ ಹೇಳಿಕೆಗೆ ಚುನಾವಣಾ ಆಯೋಗವು ಪ್ರಧಾನಿಯನ್ನು ಆಕ್ಷೇಪಿಸಿದ್ದಾರೆ ಎಂದು ದೂರಿನಲ್ಲಿ ಚುನಾವಣಾ ಆಯೋಗ ರಾಹುಲ್ ಗಾಂಧಿಗೆ ನೋಟಿಸು ನೀಡಿದೆ.

ರಾಜಸ್ತಾನದ ಚುನಾವಣಾ ರ‍್ಯಾಲಿಯಲ್ಲಿ ರಾಹುಲ್ ಗಾಂದಿ ಪನೌತಿ ಎಂಬ ಪದ ಬಳಸಿದ್ದನ್ನು ಚುನಾವಣೆ ಆಯೋಗಕ್ಕೆ ದೂರಿನಲ್ಲಿ ತೋರಿಸಲಾಗಿದೆ.