ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಹಲಾಲ್ ಸರ್ಟಿಫಿಕೆಟಿನ ಉತ್ಪನ್ನಗಳನ್ನು ನಿಷೇಧಿಸಲು ಕೇಂದ್ರ ಸರಕಾರ ನಿರ್ಧರಿಸಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು. ಹೈದರಾಬಾದಿನಲ್ಲಿ ಅವರು ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದರು.
ತೆಲಂಗಾಣದಲ್ಲಿ ಚುನಾವಣೆ ಹತ್ತಿರ ಇರುವಂತೆ ಅಮಿತ್ ಶಾರ ಈ ಹೇಳಿಕೆ ಬಂದಿದೆ. ನೀವು ವೊಟು ಕೊಡುವಾಗ ಒಬ್ಬ ಶಾಸಕನ ಭವಿಷ್ಯ ಮಾತ್ರವಲ್ಲ ನಿರ್ಣಯಿಸಲ್ಪುವುದು. ಇಡೀ ತೆಲಂಗಾಣ ರಾಜ್ಯದ ಭವಿಷ್ಯ ಅದರಲ್ಲಿದೆ. ಎಲ್ಲ ಪಾರ್ಟಿಗಳು ಕೆಲಸ ಮಾಡಿದ್ದನ್ನು ಅವಲೋಕನ ಮಾಡಿ ನೀವು ವೋಟು ನೀಡಬೇಕು. ಪಾರ್ಟಿಗಳ ಕೆಲಸ ನೋಡಬೇಕು. ವೋಟು ಹಾಕುವ ಸಮಯದಲ್ಲಿ ಪ್ರಧಾನಿ ಮೋದಿ ಬಿಜೆಪಿಗೆ ನೀವು ವೊಟು ಹಾಕುವಿರಿ ಎಂದು ನನಗೆ ಖಚಿತವಿದೆ ಎಂದು ಅಮಿತ್ ಶಾ ಹೇಳಿದರು.
ಕಳೆದ ಹತ್ತು ವರ್ಷದಲ್ಲಿ ಬೃಹತ್ ಸಾಲ ತೆಲಂಗಾಣದ ಮೇಲಿದೆ. ಯುವಕರು , ರೈತರು, ಹಿಂದುಳಿದವರೆಲ್ಲ ತೆಲಂಗಾಣದ ಭವಿಷ್ಯದಲ್ಲಿ ಆತಂಕದಲ್ಲಿದ್ದಾರೆ ಎಂದರು. ಸಂವಿಧಾನ ಯಾರಿಗೂ ವಿಶೇಷ ಅಧಿಕಾರ ಕೊಟ್ಟಿಲ್ಲ. ಕೆಸಿಆರ್ ಧಾರ್ಮಿಕ ಮೀಸಲಾತಿ ಕೊಟ್ಟಿರುವುದು ಸಂವಿಧಾನ ವಿರೊಧಿಯಾಗಿದೆ. ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಶೇ. ನಾಲ್ಕು ಮೀಸಲಾತಿ ಇಲ್ಲದಾಗಿಸುತ್ತೇವೆ. ಎಸ್ಎಸ್ಟಿ ಇತರ ಹಿಂದುಳಿದವರಿಗೆ ಮೀಸಲಾತಿ ಕೊಡುತ್ತೇವೆ ಎಂದು ಅವರು ಹೇಳಿದರು.












