ಮಕ್ಕಾ,ಎ.3: ಮಕ್ಕದ ಹೊಟೇಲ್‍ವೊಂದರಲ್ಲಿ ಅಗ್ನಿ ಅನಾಹುತ ನಡೆದಿದೆ. ಹೊಟೇಲಿನಲ್ಲಿದ್ದ 700ಕ್ಕೂ ಉಮ್ರ ತೀರ್ಥ ಯಾತ್ರಿಕರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಹಯ್ಯ್ ಹೌಫಾಯಿರ್‍ನ ಹದಿನೇಳು ಮಹಡಿಯ ಹೊಟೇಲಿನ 12ನೆ ಮಹಡಿಯಲ್ಲಿ ಅಗ್ನಿ ಆಕಸ್ಮಿಕ ನಡೆದಿದೆ. ಮೂರು ಮಂದಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿತು.700 ಮಂದಿ ಉಳಿದುಕೊಂಡಿದ್ದ ಹೊಟೇಲಿನಲ್ಲಿ ಅಗ್ನಿ ಕಾಣಿಸಿಕೊಂಡಿತು ಎಂದು ಮಕ್ಕದ ಸಿವಿಲ್ ಡಿಫೆನ್ಸ್ ವಕ್ತಾರ ಕರ್ನಲ್ ರಾಯಿದ್ ಅಲ್‍ಶರೀಫ್ ಹೇಳಿದರು. ಮುನ್ನೆಚ್ಚರಿಕೆಯ ಭಾಗವಾಗಿ ಜನರನ್ನು ತೆರವು ಗೊಳಿಸಲಾಯಿತು. ಹೊಟೇಲಿನ ಅಗ್ನಿಶಮನ ವ್ಯವಸ್ಥೆಯನ್ನು ಬಳಸಿ ಬೆಂಕಿಯನ್ನು ಆರಿಸಲು ಸಾಧ್ಯವಾಗಿದೆ. ಮೂರು ಮಂದಿಗೆ ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದು ಅವರಿಗೆ ರೆಡ್‍ಕ್ರೆಸೆಂಟ್ ಪ್ರಾಥಮಿಕ ಚಿಕಿತ್ಸೆ ನೀಡಿತು ಎಂದು ರಾಯಿದ್ ಅಲ್‍ಶರೀಫ್ ತಿಳಿಸಿದರು.












