ಲಂಡನ್,ಎ.3: ಉತ್ತರ ಲಂಡನ್ನ ಟ್ಯೂಬ್ ಟ್ರೈನ್ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಎಳೆದು ಹಾಕಿದ 51 ವರ್ಷದ ಮಧ್ಯವಯಸ್ಕ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಗೆಳತಿ ಈತನ ಫೋಟೊವನ್ನು ಟ್ವೀಟ್ ಮಾಡಿದ ಬಳಿಕ ಘಟನೆ ಬಯಲಾಗಿದೆ. ಪ್ಲಾಟ್ಫಾರ್ಮ್ನಲ್ಲಿ ರೈಲಿಗೆ ಕಾಯುತ್ತಾ ನಿಂತಿದ್ದಾಗ ಘಟನೆ ನಡೆದಿದೆ. ಜನಾಂಗೀಯ ವಿರೋಧಿ ಆರೋಪ ಹೊರಿಸಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರೆಂದು ವರದಿಯಾಗಿದೆ.












