ಮಸ್ಕತ್,ಎ.3: ಉದ್ಯೋಗ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿ 650 ಮಂದಿ ವಿದೇಶಿ ಕಾರ್ಮಿಕರನ್ನು ಬಂಧಿಸಲಾಗಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ. ಮಾರ್ಚ್ 24ರಿಂದ 30ರವರೆಗಿನ ಅವಧಿಯಲ್ಲಿ ಇವರನ್ನು ಬಂಧಿಸಲಾಗಿದ್ದು, ಇದೇ ಸಮಯಾವಧಿಯಲ್ಲಿ 618 ಮಂದಿಯನ್ನು ಗಡಿಪಾರುಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಬಂಧಿತರಾದ 650 ಮಂದಿ ಕೆಲಸದ ಸ್ಥಳದಿಂದ ತಪ್ಪಿಸಿಕೊಂಡವರು.ಇವರಲ್ಲಿ 324 ಮಂದಿ ಫ್ರೀ ವೀಸಾದಲ್ಲಿದ್ದವರು. ಮಸ್ಕತ್ ಗವರ್ನರೇಟ್ನದಿಂದ 200ಮಂದಿ ಮತ್ತು ಉತ್ತರ ಬತ್ತಾನದಿಂದ 248 ಮಂದಿಯನ್ನು ಬಂಧಿಸಲಾಯಿತೆಂದು ವರದಿ ತಿಳಿಸಿದೆ.












