ದೋಹ, ಎ.3: ‘ಅಲ್ಜಝೀರ’ ಚ್ಯಾನೆಲ್ ಅಧ್ಯಕ್ಷರ ಕೆಲಸಗಳ ಮೇಲೆ ನಿಗಾವಿರಿಸಲು ಮತ್ತು ಬೇಹುಗಾರಿಕೆ ನಡೆಸಲು ನೆರೆ ದೇಶಗಳಿಗೆ ಅಮೆರಿಕದ ಹ್ಯಾಕರ್ಗಳ ಸಹಾಯ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಅಮೆರಿಕದ ಇಂಟಲಿಜೆನ್ಸ್ ಏಜೆನ್ಸಿಗಳಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಹ್ಯಾಕರ್ಗಳು ಅಲ್ ಜಝೀರ ಅಧ್ಯಕ್ಷರ ಸಹಿತ ಕತರ್ ಸರಕಾರದೊಂದಿಗೆ ಸಂಬಂಧ ಹೊಂದಿರುವ ಪತ್ರಕರ್ತರ ವಿವರಗಳನ್ನು ನೆರೆಯ ದೇಶಗಳಿಗೆ ಸಂಗ್ರಹಿಸಿ ಕೊಟ್ಟು ಸಹಾಯ ಮಾಡಿದ್ದಾರೆ.
ರಾಯಿಟರ್ಸ್ ಸುದ್ದಿ ಸಂಸ್ಥೆ ನಡೆಸಿದ ತನಿಖೆಯಲ್ಲಿ ಇದಕ್ಕೆ ಸಂಬಂಧಿಸಿದ ವಿವರಗಳು ಲಭ್ಯವಾಗಿದೆ. 2017ರಲ್ಲಿ ಕತರ್ ವಿರುದ್ಧ ದಿಗ್ಬಂಧ ಜಾರಿಗೊಂಡ ಸಮಯದಲ್ಲಿ ಘಟನೆ ನಡೆದಿತ್ತು. ಬಿಬಿಸಿ ಚ್ಯಾನಲ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಲ್ಜಝೀರ ಅಧ್ಯಕ್ಷರ ಸಹಿತ ಅರಬ್ ಮಾಧ್ಯಮ ಜಗತ್ತಿನ ಪ್ರಮುಖರು ಭಾಗವಹಿಸಿದ್ದರು. ಈ ಕಾರ್ಯಕ್ರಮ ಸಹಿತ ಇಲ್ಲಿದ್ದವರ ವಿವವರಗಳನ್ನು ಹ್ಯಾಕರ್ಗಳು ಸೋರಿಕೆ ಮಾಡಲು ಶ್ರಮಿಸಿದ್ದರು.
ಐಫೋನ್ನಿಂದ ವಿವರಗಳ ಸೋರಿಕೆ ಮಾಡುವ ತಂತ್ರಜ್ಞಾನವನ್ನು ಹ್ಯಾಕರ್ಗಳು ರೂಪಿಸಿದ್ದರು. ನೆರೆಯ ದೇಶಗಳ ಭಿನ್ನಮತೀಯರು, ವಿರೋಧಿಗಳು, ಚಟುವಟಿಕೆಗಳಲ್ಲಿ ಅಸಮಾಧಾನ ಹೊಂದಿದವರಿಗೆ ಸಂಬಂಧಿಸಿದ ವಿವರಗಳು ಸೋರಿಕೆಯಾಗಿವೆ. ಇದು ಆಯಾ ದೇಶಗಳ ಇಂಟಲಿಜೆನ್ಸ್ ಯೋಜನೆಯ ಭಾಗವಾಗಿ ನಡೆದಿತ್ತು. ಬ್ರಿಟಿಷ್ ಹೋರಾಟಗಾರ, ಹಲವಾರು ಅಮೆರಿಕದ ಪತ್ರಕರ್ತರ ಮೇಲೆಯೂ ನಿಗಾವಿರಿಸಲಾಗಿತ್ತು ಎಂದು ರಾಯಿಟರ್ಸ್ ತನಿಖೆಯಲ್ಲಿ ಸ್ಪಷ್ಟವಾಗಿದೆ. ಅಮೆರಿಕದ ರಾಷ್ಟ್ರೀಯ ಸುರಕ್ಷಾ ಏಜೆನ್ಸಿ, ಅಮೆರಿಕದ ಸೇನೆಗಳ ಕನಿಷ್ಠ ಒಂಬತ್ತು ಮಾಜಿ ಅಧಿಕಾರಿಗಳು ಬೇಹುಗಾರಿಕೆಯಲ್ಲಿ ಪಾಲ್ಗೊಂಡಿದ್ದರು ಎಂದು ರಾಯಿಟರ್ಸ್ ತಿಳಿಸಿದೆ.












