ಜಾತಿ ಜನಗಣತಿ ವಿವಾದ; ಡಿಕೆ ಶಿವಕುಮಾರ್ ವಿರುದ್ಧ ಖರ್ಗೆ

0
283

ಸನ್ಮಾರ್ಗ ವಾರ್ತೆ

ಬೆಂಗಳೂರು, ಡಿ. 13: ಜಾತಿ ಜನಗಣತಿ ವಿರೋಧಿಸಿಲ್ಲ ಮತ್ತು ವೈಜ್ಞಾನಿಕವಾಗಿ ಅದನ್ನು ಜಾರಿಗೊಳಿಸಬೇಕೆಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ರಾಜ್ಯಸಭೆಯಲಿ ಜಾತಿ ಜನಗಣತಿ ವಿಷಯದಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾಜುನ ಖರ್ಗೆ ತನ್ನ ವಿರುದ್ಧ ನೀಡಿದ ಹೇಳಿಕೆಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ಜಾತಿ ಸೆನ್ಸಸ್ ಜಾರಿಗೊಳಿಸುವುದರ ವಿರುದ್ಧ ಒಕ್ಕಲಿಗ ಒಕ್ಕೂಟದ ನೇತೃತ್ವದಲ್ಲಿ ಬಿಜೆಪಿ , ಜೆಡಿಎಸ್ ನಾಯಕರು ಮತ್ತು ಸಮುದಾಯದ ಸನ್ಯಾಸಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಲ್ಲಿಸದ ಮನವಿಯಲ್ಲಿ ವಕ್ಕಲಿಗ ನಾಯಕ ಶಿವಕುಮಾರ್ ಸಹಿ ಹಾಕಿದ್ದು ಚರ್ಚೆಯಾಗಿತ್ತು.

ಜಾತಿ ಸೆನ್ಸಸ್ ಜಾರಿಗೊಳಿಸಲಾಗುವುದು ಎಂದು ಕರ್ನಾಟಕದ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಹೇಳಿತ್ತು.
ಇದನ್ನು ಬಿಜೆಪಿ ರಾಷ್ಟ್ರಮಟ್ಟದಲ್ಲಿ ಆಯುಧವನ್ನಾಗಿ ಮಾಡಿತ್ತು. ಜಾತಿ ಜನಗಣತಿಯ ಕುರಿತು ರಾಜ್ಯ ಸಭೆಯಲ್ಲಿ ಚರ್ಚೆಯ ವೇಳೆ ಬಿಜೆಪಿ ಸಂಸದ ಸುಶೀಲ್ ಕುಮಾರ್ ಶಿವಕುಮಾರ್ ನಿಲುವನ್ನು ಬೆಟ್ಟು ಮಾಡಿದರು.

ಇದಕ್ಕೆ ಕೋಪದಿಂದ ಕೆಂಡವಾದ ಮಲ್ಲಿಕಾರ್ಜುನ ಖರ್ಗೆ ನೀವು ಎಲ್ಲ ಉನ್ನತ ಜಾತಿಯವರು ಈ ವಿಷಯದಲ್ಲಿ ಒಗ್ಗಟ್ಟಿನಲ್ಲಿದ್ದೀರಿ ಎಂದು ಖಾರವಾಗಿ ಉತ್ತರ ನೀಡಿದ್ದರು.

ಕಾಂಗ್ರೆಸ್ ಚುನಾವಣೆಯ ಪ್ರಣಾಳಿಕೆಗೆ ವಿರುದ್ಧ ಡಿ.ಕೆ ಶಿವಕುಮಾರ್ ನಿಲುವು ಪ್ರದರ್ಶಿಸಿದ್ದು ವಿವಾದವಾಗಿದೆ. ನಂತರ ಡಿ.ಕೆ ಶಿಕುಮಾರ್ ಮನಸ್ಸು ಬದಲಿಸಿದ್ದಾರೆ.

ವಕ್ಕಲಿಗ ಮತ್ತು ಲಿಂಗಾಯಿತ ಸಮುದಾಯ ಈ ಸಮೀಕ್ಷೆ ಬೇಡ ಇನ್ನೊಂದು ಜಾತಿ ಜನಗಣತಿ ಮಾಡಿ ಎಂದು ಹೇಳುತ್ತಿದೆ. ವೀರಶೈವ ಲಿಂಗಾಯತ ಅಖಿಲಭಾರತ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕೂಡ ಇದನ್ನೇ ಹೇಳುತ್ತಿದ್ದಾರೆ. ಅವರು ಕೂಡ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.