ಮತಕ್ಕಾಗಿ ಬಿಜೆಪಿ ಹಣ ಹಂಚಿಕೆ ಮಾಡುತ್ತಿದೆ- ಕಾಂಗ್ರೆಸ್ ಆರೋಪ

0
1195

ಹೊಸದಿಲ್ಲಿ,ಎ.3: ಚುನಾವಣೆಗೆ ಸಂಬಂಧಿಸಿ ಮತ ಖರೀದಿಗೆ ಹಣ ವಹಿವಾಟಿನಲ್ಲಿ ಬಿಜೆಪಿ ಮುಳುಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪ್ರಧಾನಿಯ ಅರುಣಾಚಲ ಪ್ರದೇಶದ ರ‌್ಯಾಲಿಗೆ ಪೂರ್ವಭಾವಿಯಾಗಿ ಜನರಿಗೆ ಹಣ ವಿತರಿಸಲಾಯಿತೆಂದು ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು. ಮಂಗಳವಾರ ರಾತ್ರೆ ಅರುಣಾಚಲ ಮುಖ್ಯಮಂತ್ರಿ ಪೆಮಖಂಡುರ ವಾಹನ ವ್ಯೂಹಕ್ಕೆ ಪೊಲೀಸರು ದಾಳಿ ನಡೆಸಿ 1:80 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದರು ಎಂದು ಎರೆಡು ವೀಡಿಯೊಗಳನ್ನು ಪ್ರದರ್ಶಿಸುವ ಮೂಲಕ ಸುರ್ಜೇವಾಲ ಆರೋಪ ಹೊರಿಸಿದ್ದಾರೆ.

ಪೆಮ ಖಂಡುರ ವಾಹನದ ಸಾಲಿನಲ್ಲಿದ್ದ ಕಾರೊಂದರಿಂದ ಹಣವನ್ನು ತೆಗೆಯುವುವ ವೀಡಿಯೊ ಅವರು ಪ್ರದರ್ಶಿಸಿದ್ದು ಇದರಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳು ಮತ್ತು ಎರಡು ಕಾರುಗಳ ನಂಬರ್ ಪ್ಲೇಟ್ ಕಾಣಿಸುತ್ತಿವೆ. ಮತಕ್ಕಾಗಿ ಭ್ರಷ್ಟಾಚಾರ ನಡೆಯುತ್ತಿವೆ ಎನ್ನುವ ಸಾಕ್ಷ್ಯಗಳಿವೆಂದು ಸುರ್ಜೇವಾಲ ಹೇಳಿದರು. ಪ್ರಜಾಪ್ರಭುತ್ವ ಕ್ಷೀಣಿಸಿದ ದಿನಗಳಿವು. ಅರುಣಾಚಲ ಪಾಸಿಘಟ್‍ನ ಝಿಯಾದ್ ಗೆಸ್ಟ್ ಹೌಸಿನಲ್ಲಿ ನಿಲ್ಲಿಸಲಾಗಿದ್ದ ಕಾರಿನೊಳಗಿನಿಂದ ಹಣ ಹಸ್ತಾಂತರಿಸಲಾಗುತ್ತಿದೆ ಎಂದು ಯುವ ಕಾಂಗ್ರೆಸ್ಸಿನ ವಕ್ತಾರ ನೀಡಿದ್ದ ದೂರಿನಲ್ಲಿ ತನಿಖೆ ನಡೆಯಿತೆಂದು ಸುರ್ಜೇವಾಲ ತಿಳಿಸಿದರು. ಈ ಹಣ ಪ್ರಧಾನಿಯ ರ್ಯಾಲಿಯಲ್ಲಿ ವಿತರಿಸಲು ತರಲಾಗಿತ್ತು. ಚೌಕಿದಾರ್ ಚೋರ್ ಎನ್ನುವುದು ಈ ಘಟನೆಯಿಂದ ಸಾಬೀತಾಗಿದೆ ಎಂದು ಸುರ್ಜೇವಾಲ ಹೇಳಿದರು.