ಸುಳ್ಳು ಸುದ್ದಿ ಪತ್ತೆ ಹಚ್ಚುವುದಕ್ಕೆ ವಾಟ್ಸಪ್‍ನಿಂದ ಹೊಸ ಆ್ಯಪ್!

0
1397

ಹೊಸದಿಲ್ಲಿ,ಎ.3: ಲೋಕಸಭಾ ಚುನಾವಣೆ ನಿಕಟವಾಗಿದ್ದು ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚುವುದಕ್ಕಾಗಿ ವಾಟ್ಸಪ್ ಹೊಸ ಆ್ಯಪ್ ಹೊರ ತರುತ್ತಿದೆ. ಸುಳ್ಳು ಸುದ್ದಿಯೆಂದು ಅನಿಸುವ ಮೆಸೇಜ್, ಫೋಟೊ, ವೀಡಿಯೊಗಳನ್ನು ವೆರಿಫೈ ಮಾಡುವ ಸೌಕರ್ಯವನ್ನು ಕಂಪೆನಿ ಬಿಡುಗೊಡಿಸುತ್ತಿದೆ. 9643-000-888 ಎನ್ನುವ ನಂಬರಿಗೆ ಚಿತ್ರಗಳು, ವೀಡಿಯೊ, ಟೆಕ್ಸ್ಟ್ ಗಳನ್ನು ಕಳುಹಿಸಿಕೊಟ್ಟರೆ ಸುದ್ದಿ ಸುಳ್ಳೆ ಅಥವಾ ಸರಿಯಾಗಿದ್ದೇ ಎಂದು ಪತ್ತೆ ಹಚ್ಚಬಹುದಾಗಿದೆ. ಇಂಗ್ಲಿಷ್, ಹಿಂದಿ, ಬಂಗಾಳಿ, ಮಲಯಾಳಂ ಮುಂತಾದ ಭಾಷೆಗಳಲ್ಲಿ ಹೊಸ ಲಭ್ಯವಾಗಲಿದೆ. ಇಂತಹ ವ್ಯವಸ್ಥೆಯನ್ನು ಈಗಾಗಲೇ ಬೂಂ,ಆಲ್ಟ್ ನ್ಯೂಸ್, ಮೊದಲಾದ ವೆಬ್‍ಸೈಟ್‍ಗಳು ಪರಿಚಯಿಸಿವೆ. ವಿವಿಧ ಭಾಷೆಗಳಲ್ಲಿ ಬಿಬಿಸಿ ಕೂಡ ಈ ಸೇವೆಯನ್ನು ಒದಗಿಸುತ್ತಿದೆ. ಆದರೆ ವಾಟ್ಸಪ್ ಇಂತಹ ಸೇವೆಯನ್ನು ಮೊದಲ ಬಾರಿ ಆರಂಭಿಸಿದೆ. ಸುಳ್ಳು ಸುದ್ದಿಗಳು ವ್ಯಾಪಕವಾಗಿ ಪ್ರಚಾರವಾಗುತ್ತಿರುವುದರಿಂದ ವಾಟ್ಸಪ್ ಆರಂಭದಿಂದಲೂ ಆರೋಪದ ಕಟಕಟೆಯಲ್ಲಿ ಭಾರತದಲ್ಲಿದೆ. ಜನರ ಗುಂಪು ಹತ್ಯೆಗೆ ವಾಟ್ಸಪ್‍ನಲ್ಲಿ ಸುಳ್ಳು ಸುದ್ದಿ ಹರಡಿದ್ದರಿಂದ ಸಂಭವಿಸಿದೆ ಎಂಬ ಆರೋಪವೂ ಅದರ ಮೇಲಿದೆ.