ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

0
1352

ಕಲ್ಪಟ್ಟ,ಎ. 4: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಅವರ ಸಹೋದರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವ ವೇಳೆ ಅವರ ಜೊತೆಯಲ್ಲಿದ್ದರು. ವಯನಾಡ್, ಮಲಪ್ಪುರಂ ಡಿಸಿಸಿ ಅಧ್ಯಕ್ಷರು, ಮುಸ್ಲಿಂ ಲೀಗ್ ನಾಯಕ ಸಾದಿಕಲಿ ಶಿಹಾಬ್ ತಂಙಳ್‍ರೊಂದಿಗೆ ರಾಹುಲ್ ಗಾಂಧಿ ಜಿಲ್ಲಾಧಿಕಾರಿಯ ಛೇಂಬರ್‍ಗೆ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಕಲ್ಲಿಕೋಟೆಯಿಂದ ಹೆಲಿಕಾಪ್ಟರ್‍ನಲ್ಲಿ ವಯನಾಡಿಗೆ ಬಂದಿದ್ದರು. ಅವರನ್ನು ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಮುಸ್ಲಿಂ ಲೀಗ್ ಸಂಸದ ಕುಂಞಾಲಿಕುಟ್ಟಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸ್ವಾಗತಿಸಿದರು. ರಾಹುಲ್ , ಪ್ರಿಯಾಂಕಾ ಹಾಗೂ ಕಾಂಗ್ರೆಸ್ ನಾಯಕರು ತೆರೆದ ವಾಹನದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ನಾಮಪತ್ರವನ್ನು ಸಲ್ಲಿಸಿದ್ದಾರೆ. ಅವರನ್ನು ಅಪಾರ ಬೆಂಬಲಿಗರು ಜಿಲ್ಲಾಧಿಕಾರಿ ಕಚೇರಿಯವರೆಗೆ ಹಿಂಬಾಲಿಸಿದರು.