ಹೊಸದಿಲ್ಲಿ,ಎ.8: ತಮಿಳ್ನಾಡಿನಲ್ಲಿರುವ ತನ್ನ ವಸತಿಗೂ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಯುವುದನ್ನು ತಾನು ನಿರೀಕ್ಷಿಸುತ್ತಿದ್ದೇನೆ ಎಮದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದರು. ಚುನಾವಣಾ ಪ್ರಚಾರಕ್ಕೆ ಅಡ್ಡಗಾಲು ಹಾಕಲು ಬಿಜೆಪಿ ಕಳೆದ ಮಂಗಳವಾರದಿಂದ ಆರಂಭಿಸಿದೆ ಎಂದು ಚಿದಂಬರಂ ಟ್ವೀಟ್ ಮಾಡಿ ಆರೋಪಿಸಿದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ರ ನಿಕಟ ಸಹಾಯಕರ ಮನೆಗಳಿಗೆ ಕಳೆದ ದಿವಸ ಆದಾಯ ತೆರಿಗೆ ಇಲಾಖೆಯ ದಾಳಿಗೆ ಅವರು ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ‘ಚೆನ್ನೈಯ ಶಿವಗಂಗಾ ಕ್ಷೇತ್ರದಲ್ಲಿರುವ ತನ್ನ ಮನೆಗೆ ದಾಳಿ ಮಾಡಲು ಆದಾಯ ತೆರಿಗೆ ಇಲಾಖೆ ಯೋಜನೆ ಹಾಕಿಕೊಂಡಿದೆ ಎಂದು ತಾನು ಹೇಳುತ್ತೇನೆ. ತನಿಖೆಗೆ ಬರುವ ತಂಡವನ್ನು ನಾವು ಸ್ವಾಗತಿಸುತ್ತಿದ್ದೇವೆ. ನಮ್ಮಲ್ಲಿ ಅಡಗಿಸಿಡುವಂತಹದ್ದು ಏನೂ ಇಲ್ಲ ಎಂದು ಆದಾಯ ತೆರಿಗೆ ಇಲಾಖೆಗೂ ಗೊತ್ತಿದೆ. ಅವರು ಮತ್ತು ಬೇರೆ ಏಜೆನ್ಸಿಗಳು ಇದಕ್ಕಿಂತ ಮುಂಚೆಯೂ ನಮ್ಮ ಮನೆಗೆ ದಾಳಿ ಮಾಡಿದ್ದಾರೆ. ಆದರೆ ಅಲ್ಲಿ ಅವರಿಗೆ ಏನೂ ಸಿಕ್ಕಿಲ್ಲ. ಅದರೆ ಬಿಜೆಪಿ ಈ ರೀತಿ ಚುನಾವಣಾ ಪ್ರಚಾರಕ್ಕೆ ಅಡ್ಡಗಾಲು ಹಾಕಲು ಯತ್ನಿಸುತ್ತಿದೆ’ಎಂದು ಚಿದಂಬರಂ ಹೇಳಿದರು. ಜನರಿಗೆ ಈ ಸರಕಾರದ ಅಕ್ರಮಗಳು ಗೊತ್ತಿದೆ. ಚುನಾವಣೆಯಲ್ಲಿ ಬಿಜೆಪಿ ಪಾಠ ಕಲಿಯಲಿದೆ.ಶಿವಗಂಗಾದಿಂದ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಕಾಂಗ್ರೆಸ್ ಟಿಕೆಟಿನಲ್ಲಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಕಾರ್ತಿಯನ್ನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಲು ಬಿಜೆಪಿ ದಾಳಿಗೆ ಶ್ರಮಿಸುತ್ತಿದೆ ಎಂದು ಚಿದಂಬರಂ ಹೇಳಿದರು.












