ಶೇ.5 ರಷ್ಟು ವಿವಿ ಪ್ಯಾಟ್ ಸ್ಲಿಪ್‍ಗಳ ಎಣಿಕೆಗೆ ಸುಪ್ರೀಂ ಕೋರ್ಟು ಆದೇಶ

0
934

ಹೊಸದಿಲ್ಲಿ,ಎ.8: ದೇಶದ ಪ್ರತಿಯೊಂದೂ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಶೇ.5ರಷ್ಟು ವಿವಿಪ್ಯಾಟ ಸ್ಲಿಪ್‍ಗಳ ಎಣಿಕೆ ಮಾಡಬೇಕೆಂದು ಸುಪ್ರೀಂಕೋರ್ಟು ಆದೇಶ ಹೊರಡಿಸಿದೆ. ಇದೇ ಚುನಾವಣೆಯಲ್ಲಿ ಎಲ್ಲ ಲೋಕಸಭಾ ಕ್ಷೇತ್ರಗಳ ವಿವಿ ಪ್ಯಾಟ ಸ್ಲಿಪ್‍ಗಳನ್ನು ಎಣಿಸಬೇಕೆಂದು ಚೀಫ್ ಜಸ್ಟಿಸ್ ಅಧ್ಯಕ್ಷತೆಯ ಪೀಠ ಆದೇಶಿಸಿದೆ.

ಚುನಾವಣೆಯ ಒಂದು ಫಲಿತಾಂಶ ಪ್ರಕಟಿಸಿದಾಗಲೂ ಅದರಲ್ಲಿ ಎಲ್ಲರನ್ನೂ ತೃಪ್ತಿ ಪಡಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟು ತಿಳಿಸಿದೆ. ಈ ವಿಷಯದಲ್ಲಿ ಹಲವು ಪಾರ್ಟಿಗಳ ಅತೃಪ್ತಿಯಿರುವಾಗ ಕಣ್ಣು ಮುಚ್ಚಿರಲು ಕೋರ್ಟಿಗೆ ಸಾಧ್ಯವಿಲ್ಲ ಎಂದು ಚೀಫ್ ಜಸ್ಟಿಸ್ ಹೇಳಿದರು. ಫಲಿತಾಂಶದ ಕುರಿತು ಯಾವುದಾದರೂ ಒಂದು ಕ್ಷೇತ್ರದಲ್ಲಿ ಯಾವುದಾದರೊಂದು ಸ್ಥಾನದಲ್ಲಿ ಶಂಕೆಯಿದ್ದರೆ ಅಭ್ಯರ್ಥಿಯ ಬೇಡಿಕೆಯ ಪ್ರಕಾರ ವೋಟಿಂಗ್ ಮೆಶಿನ್ ರೀ-ಕೌಂಟಿಗ್ ಮತ್ತು ವಿವಿ ಪ್ಯಾಟ ಸ್ಲಿಪ್‍ಗಳನ್ನು ಎಣಿಸಬೇಕೆಂದು ಸುಪ್ರೀಂಕೋರ್ಟು ಆದೇಶ ಹೊರಡಿಸಿದೆ.

ವಿವಿಪ್ಯಾಟ ಸ್ಲಿಪ್‍ಗಳನ್ನು ಲೆಕ್ಕ ಮಾಡುವುದಾದರೆ ಈಗಿನ ಎಣಿಕೆಯ ಸಮಯಕ್ಕಿಂತ ಒಂದು ಶೇ. ಸ್ಲಿಪ್‍ಗಳ ಎಣಿಕೆಗೆ ತಲಾ ಒಂದು ಗಂಟೆ ಹೆಚ್ಚುವರಿ ಸಮಯದ ಆಗಬಹುದು ಎಂದು ಚುನಾವಣಾ ಆಯೋಗ ತಿಳಿಸಿತು. ಆದ್ದರಿಂದ ಎಪ್ರಿಲ್ 23ಕ್ಕೆ ನಡೆಯುವ ಚುನಾವಣೆಯ ಫಲಿತಾಂಶ ಘೋಷಿಸಲು ತಡವಾಗಬಹುದು ಎಂದು ತಿಳಿಸಿತು. ಶೇ.ಒಂದರಷ್ಟು ಸ್ಲಿಪ್‍ಗಳನ್ನು ಎಣಿಕೆ ಮಾಡಬಹುದು ಎಂದು ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟಿಗೆ ತಿಳಿಸಿತ್ತು. ಆದರೆ ಶೇ.50ರಷ್ಟು ವಿವಿಪ್ಯಾಟ ಸ್ಲಿಪ್‍ಗಳ ಎಣಿಕೆ ಮಾಡಬೇಕೆಂದು ಕಾಂಗ್ರೆಸ್, ಟಿಡಿಪಿ, ಎನ್‍ಸಿಪಿ, ಸಿಪಿಎಂ, ಸಿಪಿಐ, ಡಿಎಂಕೆ ಸಹಿತ 21 ಪಾರ್ಟಿಗಳು ಆಗ್ರಹಿಸಿತ್ತು.

ಹೆಚ್ಚು ಅಧಿಕಾರಿಗಳನ್ನು ಬಳಸಿಕೊಂಡರೆ ಶೇ.50ರಷ್ಟು ವಿವಿಪ್ಯಾಟವನ್ನು ಎಣಿಕೆ ಮಾಡಲು ಮೂರು ದಿವಸ ಸಾಕು. ವರ್ಷಗಳಿಂದ ಈ ಕುರಿತು ನಡೆದ ಹೋರಾಟದ ಬಳಿಕ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ವಿವಿಪ್ಯಾಟ ಯಂತ್ರಕ್ಕೆ ಅವಕಾಶ ದೊರಕಿದೆ. ಇದರ ಮೂಲಕ ಗುರಿ ಸಾಧಿಸಬೇಕಾದರೆ ಫಲಪ್ರದವಾಗಿ ಅದನ್ನು ಬಳಸಬೇಕಾಗಿದೆ ಎಂದು ಅಫಿದಾವಿತ್‍ನಲ್ಲಿ ತಿಳಿಸಲಾಗಿತ್ತು.