ಬಾಲಿವುಡ್ ನಟಿ ಸೋನಾಕ್ಷಿ ನಟ ಜಹೀರ್ ಇಕ್ಬಾಲ್ ಜತೆ ಮದುವೆ; ಲವ್ ಜಿಹಾದ್ ಪೋಸ್ಟರ್ ಪ್ರತ್ಯಕ್ಷ

0
269

ಸನ್ಮಾರ್ಗ ವಾರ್ತೆ

ಬಾಲಿವುಡ್ ನಟಿ ಸೋನಾಕ್ಷಿ ಅವರ ವಿರುದ್ಧ ದ್ವೇಷ ಕಾರುವ ಪೋಸ್ಟರ್ ಗಳು ಬಿಹಾರದಲ್ಲಿ ರಾರಾಜಿಸುತ್ತಿವೆ. ನಟ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಮದುವೆಯಾಗಿರುವುದನ್ನು ಲವ್ ಜಿಹಾದ್ ಎಂದು ಈ ಪೋಸ್ಟರ್ ನಲ್ಲಿ ಕರೆಯಲಾಗಿದೆಯಲ್ಲದೆ ಬಿಹಾರಕ್ಕೆ ನಟಿ ಸೋನಾಕ್ಷಿ ಕಾಲಿಡಬಾರದು ಎಂದು ಕೂಡ ಬೆದರಿಕೆಯನ್ನು ಹಾಕಲಾಗಿದೆ.

ಜೂನ್ 23ರಂದು ಸ್ಪೆಷಲ್ ಮ್ಯಾರೇಜ್ ಆಕ್ಟ್ ನ ಅಡಿಯಲ್ಲಿ ಸೋನಾಕ್ಷಿ ಮತ್ತು ಜಹೀರ್ ವಿವಾಹವಾಗಿದ್ದರು. ಹಿಂದೂ ಶುಭವಾನಿ ಸೇನಾ ಎಂಬ ಹೆಸರಿನ ಸಂಘಟನೆಯು ಈ ಪೋಸ್ಟರ್ ಗಳನ್ನು ಹಂಚಿಕೊಂಡಿದೆ. ಸೋನಾಕ್ಷಿ ಮತ್ತು ಜಹೀರ್ ಈ ದೇಶವನ್ನು ಸಂಪೂರ್ಣವಾಗಿ ಇಸ್ಲಾಮಿಕರಣ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಈ ಸಂಘ ಆರೋಪಿಸಿದೆ.

ಇವರಿಬ್ಬರ ವಿವಾಹವು ಲವ್ ಜಿಹಾದಿಗೆ ಪ್ರೇರಣೆ ನೀಡುತ್ತಿದೆ. ಪ್ರೇಮದ ಹೆಸರಲ್ಲಿ ನಡೆಯುತ್ತಿರುವ ಧಾರ್ಮಿಕ ಒಳಸಂಚು ಇದಾಗಿದೆ. ಹಿಂದೂ ಸಂಸ್ಕೃತಿಯನ್ನು ನಾಶಪಡಿಸುವ ಉದ್ದೇಶ ಇದರ ಹಿಂದಿದೆ. ತನ್ನ ಮಗಳ ವಿವಾಹದ ವಿಷಯದಲ್ಲಿ ಶತ್ರುಘ್ನ ಸಿನ್ಹ ಅವರು ಆಲೋಚಿಸಬೇಕು ಇಲ್ಲದಿದ್ದರೆ ಮುಂಬೈಯಲ್ಲಿರುವ ತನ್ನ ಮನೆಗೆ ಇಟ್ಟಿರುವ ರಾಮಾಯಣ ಎಂಬ ಹೆಸರನ್ನು ಮತ್ತು ಮಕ್ಕಳಿಗೆ ಇಟ್ಟಿರುವ ಲವ ಕುಶ ಎಂಬ ಹೆಸರನ್ನೂ ಬದಲಿಸಬೇಕು ಎಂದು ಅದು ಬೆದರಿಕೆ ಹಾಕಿದೆ.

ಇದೇ ವೇಳೆ ನನ್ನ ಮಗಳು ಕಾನೂನನ್ನು ಸಂವಿಧಾನವನ್ನು ಉಲ್ಲಂಘಿಸಿಲ್ಲ ಮತ್ತು ಈ ವಿಷಯದಲ್ಲಿ ಯಾರೂ ಮಧ್ಯಪ್ರವೇಶಿಸುವುದಕ್ಕೆ ಬಿಡಲ್ಲ ಎಂದು ಶತ್ರುಘ್ನ ಸಿನ್ಹ ಹೇಳಿದ್ದಾರೆ.