ರಫೇಲ್: ಶನಿವಾರದೊಳಗೆ ಅಫಿದಾವಿತ್ ಸಲ್ಲಿಸಲು ಸುಪ್ರೀಂಕೋರ್ಟುನಿಂದ ಕೇಂದ್ರ ಸರಕಾರಕ್ಕೆ ಆದೇಶ

0
1622

ಹೊಸದಿಲ್ಲಿ,ಎ.30: ರಫೇಲ್ ಯುದ್ಧವಿಮಾನ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದ ಪುನರ್‍ವಿಮರ್ಶೆ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟು ಮುಂದೂಡಿದ್ದು ಅಫಿದಾವಿತ್ ಸಲ್ಲಿಕೆಗೆ ನಾಲ್ಕುವಾರಗಳ ಸಮಯವಕಾಶ ನೀಡಬೇಕೆನ್ನುವ ಕೇಂದ್ರ ಸರಕಾರದ ವಾದವನ್ನು ತಳ್ಳಿಹಾಕಿದೆ. ಶನಿವಾರದೊಳಗೆ ಅಫಿದಾವಿತ್ ಸಲ್ಲಿಸಬೇಕೆಂದು ಸೂಚಿಸಿತು. ಸೋಮವಾರ ಪುನಃ ಕೇಸು ವಿಚಾರಣೆಗೆ ಬರಲಿದೆ.

ಕಳೆದ ದಿವಸ ಪ್ರಕರಣದ ವಿಚಾರಣೆಯ ವೇಳೆ ಹೆಚ್ಚು ಸಮಯವಕಾಶಕ್ಕೆ ಕೇಂದ್ರಸರಕಾರ ಕೋರಿಕೆ ಸಲ್ಲಿಸಿತ್ತು. ಈ ವಿಷಯದಲ್ಲಿ ವಿವರವಾದ ಉತ್ತರವನ್ನು ನೀಡಬೇಕೆಂದು ಚೀಫ್ ಜಸ್ಟಿಸ್ ರಂಜನ್‍ಗೊಗೊಯಿಯವರ ಅಧ್ಯಕ್ಷತೆಯ ಪೀಠ ಸೂಚಿಸಿತ್ತು. ರಫೇಲ್ ಪ್ರಕರಣದಲ್ಲಿ ಸರಕಾರಕ್ಕೆ ಕ್ಲಿನ್ ಚಿಟ್ ನೀಡಿದ್ದನ್ನು ಸುಪ್ರೀಂಕೋರ್ಟು ಮರುಪರಿಶೀಲಿಸುವುದೆಂದು ಚೀಫ್ ಜಸ್ಟಿಸ್ ಅಧ್ಯಕ್ಷತೆಯ ಪೀಠ ಈ ಹಿಂದೆ ತೀರ್ಮಾನಿಸಿತ್ತು. ರಕ್ಷಣಾ ಸಚಿವಾಲಯದಿಂದ ಸೋರಿಕೆಯಾದ ರಹಸ್ಯ ದಾಖಲೆಗಳನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬಾರದೆಂದು ಕೇಂದ್ರ ಸರಕಾರ ವಾದಿಸಿದ್ದು ಅದನ್ನು ಕೋರ್ಟು ಈಗಾಗಲೇ ತಿರಸ್ಕರಿಸಿದೆ.ಪ್ರತಿಪಕ್ಷ ತೀಕ್ಷ್ಣ ಆರೋಪ ಹೊರಿಸುತ್ತಿದ್ದ ವೇಳೆಯೇ ಕಳೆದ ಡಿಸೆಂಬರ್‍ನಲ್ಲಿ ಸುಪ್ರೀಂಕೋರ್ಟಿನಿಂದ ಕೇಂದ್ರ ಸರಕಾರಕ್ಕೆ ಕ್ಲೀನ್ ಚಿಟ್ ಸಿಕ್ಕಿತ್ತು. ನಂತರ ದ ಹಿಂದು ದೈನಿಕ ರಹಸ್ಯ ದಾಖಲೆಗಳ ಪ್ರತಿಯನ್ನು ಬಹಿರಂಗಗೊಳಿಸಿತ್ತು. ಇದು ರಕ್ಷಣಾ ಸಚಿವಾಲಯದಿಂದ ಕದ್ದು ಹೋದ ದಾಖಲೆಗಳಾಗಿದ್ದು ಇದನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬಾರದೆಂದು ಸರಕಾರ ವಾದಿಸಿತ್ತು.