ಹೊಸದಿಲ್ಲಿ,ಮೇ 1: ದೇಶದಾದ್ಯಂತ ಅಡಿಗೆ ಅನಿಲ ದರ ಹೆಚ್ಚಳವಾಗಿದೆ. ಸಬ್ಸಿಡಿಯ 14.2 ಕಿಲೊಗ್ರಾಮ್ನ ಸಿಲಿಂಡರ್ಗೆ 0.28 ರೂಪಾಯಿ ಹೆಚ್ಚಳವಾಗಿದೆ. ಇದು ದಿಲ್ಲಿಯ ಲೆಕ್ಕವಾದರೆ ಮುಂಬೈಯಲ್ಲಿ 0.29 ರೂಪಾಯಿ ಬೆಲೆ ಹೆಚ್ಚಳವಾಯಿತು.
ಸಬ್ಸಿಡಿಯ ಸಿಲಿಂಡರ್ಗೆ ಮೇ.1ರ ನಂತರದ ದರದ ವಿವರ ಹೀಗಿದೆ-
ಮೆಟ್ರೊ ದಿಲ್ಲಿಯಲ್ಲಿ 14,2 ಕಿಲೊಗ್ರಾಂ ಸಿಲಿಂಡರ್ಗೆ 496.14ರೂಪಾಯಿ, ಕೊಲ್ಕತಾದಲ್ಲಿ 499.29 ರೂಪಾಯಿ, ಮುಂಬೈಯಲ್ಲಿ 493.86 ರೂಪಾಯಿ, ಚೆನ್ನೈಯಲ್ಲಿ 484.02ರೂಪಾಯಿಯಾಗಿದ್ದು ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗೆ ಉಭಯ ನಗರಗಳಲ್ಲಿ ಆರು ರೂಪಾಯಿ ಹೆಚ್ಚಳವಾಗಿದೆ. ದಿಲ್ಲಿಯಲ್ಲಿ 712.50 ರೂಪಾಯಿ , ಕೊಲ್ಕತಾದಲ್ಲಿ 738.50 ರೂಪಾಯಿ, ಮುಂಬೈಯಲ್ಲಿ 648.50 ರೂಪಾಯಿ ಚೆನ್ನೈಯಲ್ಲಿ 728 ರೂಪಾಯಿ ದರವಾಗಿದೆ.
ಸಬ್ಸಿಡಿ ರಹಿತ ಸಿಲಿಂಡರ್ಗೆ ಮೇ 1ರಿಂದ ದಿಲ್ಲಿಯಲ್ಲಿ 712.50 ರೂಪಾಯಿ, ಕೊಲ್ಕತಾ 738.50 ರೂಪಾಯಿ, ಮುಂಬೈಯಲ್ಲಿ 684.50ರೂಪಾಯಿ, ಚೆನ್ನೈಯಲ್ಲಿ 728.00ರೂಪಾಯಿಯಾಗಿದೆ. ಈ ವರ್ಷ ಈವರೆಗೆ ಸಬ್ಸಿಡಿ ರಹಿತ ಸಿಲಿಂಡರ್ಗೆ 96-98.5ರೂಪಾಯಿವರೆಗೆ ದರ ಕಡಿತವಾಗಿತ್ತು. ವರ್ಷದಲ್ಲಿ ಒಬ್ಬ ಬಳಕೆದಾರನಿಗೆ ಹನ್ನೆರಡು ಸಿಲಿಂಡರನ್ನು ಸರಕಾರ ಸಬ್ಸಿಡಿಯಲ್ಲಿ ನೀಡುತ್ತಿದೆ.












