ಕಲೋಟ್,ಮೇ 1: ಅಮೆರಿಕದ ನಾರ್ತ್ ಕರೊಲಿನ ವಿಶ್ವವಿದ್ಯಾನಿಲಯದಲ್ಲಿ ಗುಂಡಿನ ದಾಳಿ ನಡೆದಿದ್ದು ಇಬ್ಬರು ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ. ಮಂಗಳವಾರ ಸಂಜೆ 5:45ಕ್ಕೆ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿನಲ್ಲಿ ಗುಂಡಿನ ದಾಳಿ ನಡೆಯಿತು. ಗಾಯಾಳುಗಳಲ್ಲಿ ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಗುಂಡು ಹಾರಾಟ ನಡೆಸಿದ ಘಟನೆಗೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ. ವಾರ್ಷಿಕ ಪರೀಕ್ಷೆಯ ಮೊದಲು ತರಗತಿಗಳು ಕೊನೆಗೊಂಡ ದಿವಸವಾದ ನಿನ್ನೆ ದಾರುಣ ಘಟನೆ ನಡೆದಿದೆ. ವಿಶ್ವವಿದ್ಯಾನಿಲಯದ ಕೆನಡಿ ಹಾಲ್ ಅಡ್ಮಿನಿಸ್ಟ್ರೇಟಿವ್ ಬಿಲ್ಡಿಂಗ್ಗಳಲ್ಲಿ ಗುಂಡುಹಾರಾಟ ನಡೆದಿದೆ. ಘಟನೆಯ ನಂತರ ವಿಶ್ವವಿದ್ಯಾನಿಲಯದ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.30,000ದಷ್ಟು ವಿದ್ಯಾರ್ಥಿಗಳು ಮತ್ತು 3000ದಷ್ಟು ಫ್ಯಾಕಲ್ಟಿಗಳು, ನೌಕರರನ್ನು ನಾರ್ತ್ ಕೆರೊಲಿನ ವಿಶ್ವವಿದ್ಯಾನಿಲಯ ಹೊಂದಿದೆ.












