ವಿಕಿಲಿಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್‍ರಿಗೆ 50 ವಾರಗಳ ಶಿಕ್ಷೆ

0
1268

ಲಂಡನ್,ಮೇ 1: ಜಗತ್ತಿನಾದ್ಯಂತ ರಹಸ್ಯ ದಾಖಲೆಗಳ ಮೂಲಕ ಕೋಲಾಹಲ ಸೃಷ್ಟಿಸಿದ ವಿಕಿಲಿಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್‍ರಿಗೆ(47) ಜಾಮೀನಿನ ಶರ್ತಗಳನ್ನುಉಲ್ಲಂಘಿಸಿದ್ದಕ್ಕಾಗಿ ಇಂದು ಲಂಡನ್‍ನ ನ್ಯಾಯಾಲಯವೊಂದು ಐವತ್ತು ವಾರಗಳ ಸಜೆಯನ್ನು ವಿಧಿಸಿ ತೀರ್ಪು ನೀಡಿತು. ಲಂಡನ್‍ನ ಇಕ್ವೆಡೋರ್ ದೂತವಾಸದಲ್ಲಿ ಏಳು ವರ್ಷಗಳಿಂದ ಆಶ್ರಯ ಪಡೆದಿದ್ದ ಅಸಾಂಜ್‍ರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಆದರೆ ಅಸಾಂಜ್ 2012ರಲ್ಲಿ ಇಕ್ವೆಡೋರ್ ದೂತವಾಸದಲ್ಲಿ ಆಶ್ರಯ ಪಡೆದಿದ್ದರು. ಸ್ವೀಡನ್‍ನಲ್ಲಿ ಅತ್ಯಾಚಾರ ಆರೋಪದಿಂದ ರಕ್ಷಣೆ ಪಡೆಯುವ ಉದ್ದೇಶದಲ್ಲಿ ಅವರು ದೂತವಾಸದ ಮೊರೆಹೋಗಿದ್ದರು.

ಇಕ್ವೆಡೋರ್ ಅವರಿಗೆ ಆಶ್ರಯವನ್ನು ಹಿಂಪಡೆದುಕೊಂಡದ್ದರಿಂದ ಎಪ್ರಿಲ್ ಹನ್ನೊಂದರಂದು ಅವರು ಬಂಧನಕ್ಕೊಳಗಾಗಿದ್ದರು. ಜಗತ್ತಿನಾದ್ಯಂತ ರಹಸ್ಯ ದಾಖಲೆಗಳನ್ನು ಬಹಿರಂಗಗೊಳಿಸುವ ಮೂಲಕ ಕೋಲಾಹಲ ಹುಟ್ಟು ಹಾಕಿದ ವಿಕಿಲಿಕ್ಸ್‌ನ್ನು ಅವರು ಸ್ಥಾಪಿಸಿದ್ದರು. ಅವರನ್ನು ಗುರುವಾರ ಲಂಡನ್‍ನ ಇಕ್ವೆಡೋರ್ ದೂತವಾಸದ ಸಮೀಪದಿಂದ ಬಂಧಿಸಿ ಕರೆತರಲಾಗಿತ್ತು. 2010ರಲ್ಲಿ ಅವರ ವಿರುದ್ಧ ಸ್ವೀಡನ್‍ನ ಇಬ್ಬರು ಮಹಿಳೆಯರು ಲೈಂಗಿಕ ಶೋಷಣೆ ಮತ್ತು ಅತ್ಯಾಚಾರ ಆರೋಪ ಹೊರಿಸಿದ್ದರು. ಸ್ವೀಡನ್‍ನಲ್ಲಿ ಅವರ ವಿರುದ್ಧ ಕೇಸು ದಾಖಲಿಸಿ ಆರೆಸ್ಟ್ ವಾರಂಟ್ ಹೊರಡಿಸಲಾಗಿತ್ತು. ಈ ಆರೋಪಗಳನ್ನು ಈಗಾಗಲೇ ನಿರಾಧಾರವಾದುದು ಎಂದು ಅಸಾಂಜ್ ತಿರಸ್ಕರಿಸಿದ್ದಾರೆ. 2010ರಲ್ಲಿ ವಿಕಿಲಿಕ್ಸ್ ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧದ ಕುರಿತ ರಹಸ್ಯ ದಾಖಲೆಗಳನ್ನು ಪ್ರಕಟಿಸಿತು. ಅಮೆರಿಕ ಅವರನ್ನು ಗಡಿಪಾರು ಮಾಡಿದೆ.
2017ರಲ್ಲಿ ಸ್ವೀಡನ್ ಅವರ ವಿರುದ್ಧ ಇದ್ದ ಅತ್ಯಾಚಾರ ಆರೋಪವನ್ನು ಹಿಂಪಡೆದಿತ್ತು. ನಂತರ ಅವರು ಇಕ್ವೊಡೋರ್‍ನ ಪೌರತ್ವವನ್ನು ಪಡೆದುಕೊಂಡಿದ್ದರು. ಅಸಾಂಜ್ ನಿರಂತರ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದ್ದರಿಂದ ಅವರಿಗೆ ನೀಡಲಾಗಿದ್ದ ರಾಜಕೀಯ ಆಶ್ರಯವನ್ನು ಹಿಂಪಡೆಯಲಾಯಿತು ಎಂದು ಇಕ್ವೊಡೋರ್ ಅಧ್ಯಕ್ಷರು ಹೇಳಿದ್ದಾರೆ.