ಕೇರಳ: ಕಾಲೇಜಿನಲ್ಲಿ ಮುಖವಸ್ತ್ರ ಬೇಡ- ಮುಸ್ಲಿಂ ಎಜುಕೇಶನಲ್ ಸೊಸೈಟಿ

0
579

ಕಲ್ಲಿಕೋಟೆ,ಮೇ 2: ಮುಂದಿನ ಅಧ್ಯಯನ ವರ್ಷದಿಂದ ಮುಸ್ಲಿಂ ಎಜುಕೇಶನಲ್ ಸೊಸೈಟಿಯ ಕಾಲೇಜುಗಳಲ್ಲಿ ಮುಖ ಮರೆಸಿದ ವಸ್ತ್ರಧಾರಣೆಯನ್ನು ನಿಷೇಧಿಸಿ ಸಕ್ರ್ಯುಲರ್ ಹೊರಡಿಸಲಾಗಿದೆ. ಎಂಇಎಸ್ ಅಧ್ಯಕ್ಷ ಡಾ. ಪಿ.ಕೆ. ಫಝಲ್ ಗಫೂರ್ ಸಕ್ರ್ಯೂಲರ್ ಹೊರಡಿಸಿದ್ದು ಕೇರಳ ಹೈಕೋರ್ಟಿನ ತೀರ್ಪಿನ ಆಧಾರದಲ್ಲಿ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕವಾಗಿ ಸ್ವೀಕಾರಾರ್ಹವಲ್ಲದ ರೀತಿಯ ಉಡುಪು ವಿಧಾನಗಳು ಆಧುನಿಕತೆಯ ಹೆಸರಿನಲ್ಲಿ, ಧರ್ಮ ಆಚರಣೆಯ ಹೆಸರಿನಲ್ಲೇ ಆದರೂ ಒಪ್ಪಲು ಸಾಧ್ಯವಿಲ್ಲ. ಹೈಕೋರ್ಟು ತೀರ್ಪಿನ ಆಧಾರದಲ್ಲಿ ವಿದ್ಯಾರ್ಥಿನಿಯರು ಮುಖ ಮರೆಸುವ ಯಾವುದೇ ಬಟ್ಟೆಯನ್ನು ಧರಿಸಿ ತರಗತಿಗೆ ಹಾಜರಾಗುವಂತಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕೆಂದು ಸಕ್ರ್ಯೂಲರ್‍ನಲ್ಲಿ ತಿಳಿಸಲಾಗಿದ. ವಿವಾದಕ್ಕೆ ಆಸ್ಪದ ನೀಡದೆ 2019-20ರ ಅಧ್ಯಯನ ವರ್ಷದಿಂದ ಈ ಆದೇಶ ಜಾರಿಗೆ ಬರಲಿದ್ದು ಹೊಸ ಅಧ್ಯಯನ ವರ್ಷದ ಕಾಲೇಜು ಕ್ಯಾಲೆಂಡರ್ ತಯಾರಿಸಬೇಕೆಂದು ಸೂಚಿಸಲಾಗಿದೆ.