ಹೊಸದಿಲ್ಲಿ,ಮೇ 2: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರ ವಿರುದ್ಧ ಬಂದಿರುವ ದೂರುಗಳ ಕುರಿತು ಸೋಮವಾರದೊಳಗೆ ತೀರ್ಮಾನಿಸಬೇಕೆಂದು ಸುಪ್ರೀಂಕೋರ್ಟು ಆದೇಶ ಹೊರಡಿಸಿದೆ. ಇಬ್ಬರ ವಿರುದ್ಧ ಲಭಿಸಿದ ದೂರುಗಳಲ್ಲಿ ಮೇ ಆರಕ್ಕಿಂತ ಮುಂಚಿತವಾಗಿ ತೀರ್ಮಾನ ಮಾಡಬೇಕೆಂದು ಸುಪ್ರೀಂ ಕೋರ್ಟು ಚುನಾವಣಾ ಆಯೋಗಕ್ಕೆ ಆದೇಶಿಸಿತು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾರ ವಿರುದ್ಧ ಸಲ್ಲಿಸಲಾದ ದೂರುಗಳಲ್ಲಿ ಚುನಾವಣಾ ಆಯೋಗ ಕ್ರಮ ಜರಗಿಸಿಲ್ಲ ಎಂದು ಬೆಟ್ಟು ಮಾಡಿ ಕಾಂಗ್ರೆಸ್ ಸುಪ್ರೀಂಕೋರ್ಟಿನ ಮೊರೆ ಹೋಗಿತ್ತು. ಆದರೆ ಇಬ್ಬರ ವಿರುದ್ಧ ಲಭಿಸಿದ ಹನ್ನೊಂದು ದೂರುಗಳಲ್ಲಿ ಎರಡರಲ್ಲಿ ತೀರ್ಮಾನ ತಳೆದಿದ್ದು ಇತರ ದೂರುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಕೋರ್ಟಿಗೆ ತಿಳಿಸಿತು. ಮೇ ಆರಕ್ಕೆ ಮುಂಚಿತವಾಗಿ ಉಳಿದ ಒಂಬತ್ತು ದೂರುಗಳಲ್ಲಿ ತೀರ್ಮಾನ ಮಾಡಬೇಕೆಂದು ಸುಪ್ರೀಂಕೋರ್ಟು ಚುನಾವಣಾ ಆಯೋಗಕ್ಕೆ ಸೂಚಿಸಿತು. ನರೇಂದ್ರ ಮೋದಿ, ಅಮಿತ್ ಶಾ ಸೈನಿಕರ ಹೆಸರಲ್ಲಿ, ಧರ್ಮದ ಹೆಸರಲ್ಲಿ ಮತಯಾಚನೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಇಬ್ಬರ ವಿರುದ್ಧ ದೂರು ನೀಡಿದೆ.












