ಹೊಸದಿಲ್ಲಿ,ಮೇ 2: ಒಬ್ಬ ಆಡಳಿತಗಾರ ಎಂಬ ನೆಲೆಯಲ್ಲಿ ನರೇಂದ್ರ ಮೋದಿಗೆ ಇಂದಿರಾಗಾಂಧಿ, ಲಾಲ್ಬಹಾದೂರ್ ಶಾಸ್ತ್ರಿಯ ಸಮೀಪ ಬರುವ ದೂರದ ಸಾಧ್ಯತೆ ಕೂಡ ಇಲ್ಲ ಎಂದು ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಹೇಳಿದರು. ಪ್ರಮುಖ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೀಗೆ ಹೇಳಿದ್ದಾರೆ. ಇಂದಿರಾಗಾಂಧಿ, ಲಾಲ್ ಬಹಾದೂರ್ ಶಾಸ್ತ್ರಿಯವರ ಆಡಳಿತ ಮಹತ್ವ ದೇಶದ ಈಗಿನ ಆಡಳಿತವನ್ನು ಯಾವುದೇ ರೀತಿಯಲ್ಲಿ ಹೋಲಿಸಲು ಸಾಧ್ಯವಿಲ್ಲ ಎಂದು ಮನ್ಮೋಹನ್ ಸಿಂಗ್ ಹೇಳಿದರು.
ಕಾಂಗ್ರೆಸ್ಸಿನ ಆಡಳಿತ ಕಾಲದಲ್ಲಿ ಭಯೋತ್ಪಾದನಾ ದಾಳಿಯ ವೇಳೆ ಕಾಂಗ್ರೆಸ್ ಕಣ್ಣುಮುಚ್ಚಿತ್ತು ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಗಡಿಯಲ್ಲಿ ಸೈನಿಕರ ಮೇಲೆ ಭಯೋತ್ಪಾದನ ದಾಳಿ ನಡೆದಾಗ ಅಂದಿನ ಪ್ರಧಾನಿಯಾದ ಮನ್ಮೋಹನ್ ಸಿಂಗ್ ಮೌನವಾಗಿದ್ದರು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದರು. ಮುಂಬೈ ಭಯೋತ್ಪಾದನಾ ದಾಳಿಯ ವಿರುದ್ಧ ಭಾರತ ತಕ್ಕ ಉತ್ತರವನ್ನು ನೀಡಲಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದರು.
ಇದಕ್ಕೆ ಉತ್ತರ ಎಂಬ ನೆಲೆಯಲ್ಲಿ ಮನ್ಮೋಹನ್ ಸಿಂಗ್ ಹೀಗೆ ಪ್ರತಿಕ್ರಿಯಿಸಿದರು. ಸೈನಿಕ ಕಾರ್ಯಾಚರಣೆಗಿಂತ ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಒಂಟಿಗೊಳಿಸಿ, ಭಯೋತ್ಪಾದಕ ರಾಷ್ಟ್ರವೆಂದು ಎತ್ತಿ ತೋರಿಸಲು ತನ್ನ ಸರಕಾರ ಉದ್ದೇಶಿಸಿತ್ತು. ಈ ವಿಷಯದಲ್ಲಿ ಯಶಸ್ಸನ್ನು ಕೂಡ ಪಡೆದೆವು. ಮುಂಬೈ ಭಯೋತ್ಪಾದನಾ ದಾಳಿಯ ಹದಿನಾಲ್ಕು ದಿವಸಗಳ ನಂತರ ಹಫೀಝ್ ಸಯೀದ್ನನ್ನು ಜಾಗತಿಕ ಭಯೋತ್ಪಾದಕನಾಗಿ ಘೋಷಿಸಲು ಚೀನ ಸಮ್ಮತಿ ನೀಡಿತ್ತೆಂದು ಮನ್ಮೋಹನ್ ಸಿಂಗ್ ಹೇಳಿದರು.












