ಸಾರ್ವಜನಿಕ ಸ್ಥಳದಲ್ಲಿ ಮುಖವಸ್ತ್ರ ಧರಿಸದಂತೆ ಕಾನೂನು ನಿರ್ಮಿಸಬೇಕು- ಹಿಂದೂ ಐಕ್ಯ ವೇದಿಯ ಶಶಿಕಲಾ ಟೀಚರ್

0
810

ಕಲ್ಲಿಕೋಟೆ,ಮೇ 3: ಭಯೋತ್ಪಾದನೆಯ ವಿಶ್ವವಿದ್ಯಾನಿಲಯವಾಗಿ ಕೇರಳ ಬದಲಾವಣೆಯಾಗಿದೆ ಎಂದು ಹಿಂದೂ ಐಕ್ಯವೇದಿಯ ರಾಜ್ಯ ಅಧ್ಯಕ್ಷೆ ಕೆ.ಪಿ.ಶಶಿಕಲಾ ಟೀಚರ್ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಮೂಲಭೂತವಾದಿಗಳು ಹಣ ಕೊಟ್ಟು ರಾಜಕಾರಣಿಗಳನ್ನು ಬೆಳೆಸುತ್ತಿದ್ದಾರೆ. ಧಾರ್ಮಿಕ ಮೂಲಭೂತವಾದಿಗಳನ್ನು ವಿರೋಧಿಸುವವರನ್ನು ರಾಜಕೀಯ ಪಾರ್ಟಿಗಳು ವಿರೋಧಿಸುತ್ತಿವೆ ಎಂದು ಶಶಿಕಲಾ ಹೇಳಿದರು. ಅವರು ಹಿಂದೂ ಐಕ್ಯವೇದಿ ಜಿಲ್ಲಾ ಸಮಿತಿ ಸಂಘಟಿಸಿದ ಮಾರಾಡ್ ಅನುಸ್ಮರಣೆ ಸೆಮಿನಾರನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಸಾರ್ವಜನಿಕ ಸ್ಥಳದಲ್ಲಿ ಮುಖವಸ್ತ್ರ ಧರಿಸಿ ಪ್ರಯಾಣಿಸಲು ಬಿಡಲಾಗದು. ಇದಕ್ಕಾಗಿ ಕಾನೂನು ರಚಿಸಬೇಕೆಂದು ಸಾರ್ವಜನಿಕರ ನಡುವಿನಿಂದ ಆಗ್ರಹ ವ್ಯಕ್ತವಾಗಬೇಕು. ಎಂಇಎಸ್(ಮುಸ್ಲಿಂ ಎಜುಕೇಶನಲ್ ಸೊಸೈಟಿ) ಹೇಳಿದರೂ ಇಲ್ಲಿನ ಆಡಳಿತಗಾರರಿಗೆ ಸಾಧ್ಯವಾಗಿಲ್ಲ.ಧರ್ಮ ಕಲಿಸುವ ಸಂಸ್ಥೆಗಳಲ್ಲಿ ಏನನ್ನು ಕಲಿಸಲಾಗುತ್ತಿದೆ ಎಂದು ಸರಕಾರ ತಿಳಿದಿರಬೇಕು. 1921ರಲ್ಲಿ ಕೊಲೆ ಕೃತ್ಯವೆಸಗಿದವರನ್ನು ಸ್ವಾತಂತ್ರ್ಯ ಸೇನಾನಿಗಳನ್ನಾಗಿ ಮಾಡಿದ ನಾಡಿದು ಎಂದು ಶಶಿಕಲಾ ಹೇಳಿದರು.