ಗಾಝಿಯಾಬಾದ್,ಮೇ 3: ದಾರಿ ಬಿಡಲಿಲ್ಲ ಎಂದು ಆರೋಪಿಸಿ ಟ್ಯಾಕ್ಸಿಚಾಲಕನನ್ನು ಉತ್ತರಪ್ರದೇಶದ ಗಾಝಿಯಾಬಾದ್ನಲ್ಲಿ ಬೇಸ್ಬಾಲ್ ಬ್ಯಾಟ್ನಲ್ಲಿ ಹೊಡೆದು ಕೊಂದು ಹಾಕಿದ ಘಟನೆ ನಡೆದಿದೆ. 32 ವರ್ಷದ ಲಖನ್ ಸಿಂಗ್ ಅನ್ಯಾಯವಾಗಿ ಕೊಲೆಯಾದ ನತದೃಷ್ಟ ವ್ಯಕ್ತಿಯಾಗಿದ್ದು ಅವರು ಪ್ರಮುಖ ರೈಡ್ ಶೇರಿಂಗ್ ಆ್ಯಪ್ಗಾಗಿ ಕೆಲಸ ಮಾಡುತ್ತಿದ್ದರು. ಖೇಡಾ ಕಾಲನಿಯ ಯುವಕ ಮೋಹಿತ್ ಯಾದವ್ ಲಖನ್ ಸಿಂಗ್ರೊಂದಿಗೆ ಮಾತಿನ ಚಕಮಕಿ ನಡೆಸಿದ್ದನು. ಲಖನ್ರ ಟ್ಯಾಕ್ಸಿ ಎದುರುಗಡೆಯಿಂದ ಬಂದ ಮೋಹಿತ್ನ ಕಾರಿಗೆ ದಾರಿ ಬಿಡಲಿಲ್ಲ ಎಂದು ಇಬ್ಬರ ನಡುವೆ ವಿವಾದ ತಲೆದೋರಿತ್ತು. ಮೋಹಿತ್ ಲಖನ್ ಸಿಂಗ್ನ ಕಾರಿನ ಡೋರ್ ಗ್ಲಾಸ್ ಒಡೆದು ಅವರನ್ನು ಹೊರಗೆ ಎಳೆದು ಹಾಕಿ ಬೇಸ್ಬಾಲ್ ಬ್ಯಾಟ್ನಿಂದ ಹೊಡೆದಿದ್ದಾನೆ. ಲಖನ್ರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು.ಆದರೆ ಗಂಭೀರ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ.
ಲಖನ್ ಸಿಂಗ್ರ ಸಹೋದರ ದೂರು ನೀಡಿದ್ದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಲಖನ್ ಸಿಂಗ್ ಕುಸಿದು ಬಿದ್ದ ನಂತರ ಅಲ್ಲಿಂದ ಮೋಹಿತ ತಪ್ಪಿಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಇದ್ದ ಸಿಸಿಟಿವಿಯಲ್ಲಿ ಮೋಹಿತ್ ಲಖನ್ ಸಿಂಗ್ಗೆ ಹೊಡೆಯುತ್ತಿರುವ ದೃಶ್ಯಗಳು ದಾಖಲಾಗಿವೆ.












