ಫರೋಕ್(ಕೋಝಿಕ್ಕೋಡ್),ಮೇ3: ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್ ಢಿಕ್ಕಿಯಾದ ಪರಿಣಾಮ ಒಂದೇ ಕುಟುಂಬ ಮೂರು ಮಂದಿ ಮೃತಪಟ್ಟಿದ್ದಾರೆ. ಚೆರುವಣ್ಣೂರ್ ಗ್ರಾಮಪಂಚಾಯತ್ ಸಮೀಪ ಹಳೆಯ ಪೋಸ್ಟ್ ಆಫಿಸ್ ಮುಂಭಾಗದಲ್ಲಿ ಅಫಘಾತ ಸಂಭವಿಸದೆ. ಹಸನ್ಕುಟ್ಟಿ(58), ಮಕ್ಕಳಾದ ಅಬ್ದುಲ್ ಖಾದರ್(12), ಬಹಾವುದ್ದೀನ್(18) ಮೃತರಾದ ದುರ್ದೈವಿಗಳು. ಫರೋಕ್ನಿಂದ ನಲ್ಲಳ ಎಂಬಲ್ಲಿಗೆ ಬೈಕಿನಲ್ಲಿ ಹೋಗುತ್ತಿದ್ದಾಗ ತೃಶೂರಿನೆಡೆಗೆ ಹೊರಟಿದ್ದ ಸರಕಾರಿ ಬಸ್ ರಸ್ತೆ ತಿರುವಿನಲ್ಲಿ ಢಿಕ್ಕಿಯಾಗಿದೆ. ಹಸನ್ ಕುಟ್ಟಿ ಮತ್ತು ಬಹಾವುದ್ದೀನ್ ಘಟನಾ ಸ್ಥಳದಲ್ಲಿಯೇ ಮೃತಪಟ್ಟರು. ಅಬ್ದುಲ್ ಖಾದರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.












