ತಲಶ್ಶೇರಿ, ಮೇ 6: ಕೇರಳದ ಪ್ರಸಿದ್ಧ ಮಾಪಿಳ್ಳೆ ಪಾಟ್ಕ್ಕಾರ( ಹಾಡುಗಾರ) ಎರಿಂಜೋಲಿ ಮೂಸಾ ತನ್ನ 75 ವರ್ಷ ವಯಸ್ಸಿನಲ್ಲಿ ತಲಶ್ಶೇರಿಯ ಸ್ವಗೃಹದಲ್ಲಿ ನಿಧನರಾದರು. ಅವರ ಕೆಲವು ಸಮಯದಿಂದ ಶ್ವಾಸಕೋಸ ಅಸೌಖ್ಯದಿಂದ ಬಳಲುತ್ತಿದದಾರೆ. ತಲಶ್ಶೇರಿಯ ಎರಿಂಜೋಲಿಯಲ್ಲಿ 1940 ಮಾರ್ಚ್ ಹದಿನೆಂಟಕ್ಕೆ ಜನಿಸಿದ್ದ ಅವರು ಹಾಡುಗಳಿಂದ ಪ್ರಸಿದ್ಧಿ ಪಡೆದಿದ್ದು ಮೊದಲು ವಲಿಯಗತ್ ಮೂಸಾ ಎಂದು ಪರಿಚಿತರಾಗಿದ್ದರು. ಅವರು ಎರಿಂಜೋಲಿ ವಲಿಯಗತ್ (ದೊಡ್ಮನೆ) ಆಸಿಯ ಮತ್ತು ಅಬ್ದು ದಂಪತಿ ಪುತ್ರನಾಗಿ ಜನಿಸಿದ್ದರು. ಅರಿಮುಲ್ಲಪ್ಪೂಮಣಂ ಉಳ್ಳೋಳೆ ಮುಂತಾದ ನೂರಾರು ಹಾಡುಗಳನ್ನು ಹಾಡಿರುವ ಅವರು ಗ್ರಾಮೀಣ ಕಲಾ ಸಮಿತಿಯಮೂಲಕ ಬೆಳೆದು ಮೇಲೆ ಬಂದರು. ಶರತ್ಚಂದ್ರ ಮರಾಠೆಯವರ ಅಧೀನದಲ್ಲಿ ಎರಡು ವರ್ಷ ಸಂಗೀತ ಕಲಿತಿದ್ದರು. ಮುನ್ನೂರಕ್ಕೂ ಹೆಚ್ಚು ಬಾರಿ ಗಲ್ಫ್ ದೇಶಗಳಲ್ಲಿ ಮಾಪಿಳ್ಳ ಪಾಟ್ಟ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.












