ದೋಹ,ಮೇ 6: ಸಮ್ಮರ್ ಇನ್ ಕತರ್ ಯೋಜನೆಯ ಅಡಿಯಲ್ಲಿ ಅನಿವಾಸಿಗಳ ಸಂಬಂಧಿಕರು, ಗೆಳೆಯರಿಗೆ ವೀಸಾರಹಿತವಾಗಿ ಕತರ್ ಸಂದರ್ಶಿಸಬಹುದು. ಜಗತ್ತಿನ ವಿವಿಧ ಕಡೆಗಳಿಂದ ಪ್ರವಾಸಿಗನ್ನು ಹೆಚ್ಚು ಕತರ್ಗೆ ಆಕರ್ಷಿಸುವ ಸಲುವಾಗಿ ಈ ಯೋಜನೆಯನ್ನು ಸರಕಾರ ಹಮ್ಮಿಕೊಂಡಿದೆ. ಜೂನ್ ನಾಲ್ಕರಿಂದ ಆಗಸ್ಟ್ 16ರವರೆಗೆ ಕತರ್ನಲ್ಲಿರುವ ಎಲ್ಲ ದೇಶದ ಅನಿವಾಸಿಯರು ಅವರ ಸಂಬಂಧಿಕರು ಮತ್ತು ಗೆಳೆಯರನ್ನು ವೀಸಾ ರಹಿತವಾಗಿ ಸಂದರ್ಶನಕ್ಕೆ ಕತರ್ಗೆ ಕರೆಯಿಸಿಕೊಳ್ಳಬಹುದು. ಭಾರತ ಸಹಿತ ಎಂಬತ್ತು ದೇಶದವರಿಗೆ ಈಗ ಕತರ್ಗೆ ವೀಸಾ ಇಲ್ಲದೆ ಸಂದರ್ಶನ ನಡೆಸುವ ಅವಕಾಶ ಇದೆ. ಇದರಲ್ಲಿ ಸೇರದ ದೇಶಗಳ ಅನಿವಾಸಿಗಳಿಗೆ ಹೊಸ ಯೋಜನೆಯ ಪ್ರಯೋಜನ ಲಭಿಸಲಿದೆ ಎಂದು ಕತರ್ ನ್ಯಾಶನಲ್ ಟೂರಿಸಂ ಕೌನ್ಸಿಲ್ (ಕ್ಯೂಎನ್ಟಿಸಿ) ಚೀಫ್ ಮಾರ್ಕೆಟಿಂಗ್ ಆಫಿಸರ್ ರಾಶಿದ್ ಅಲ್ ಖುರೇಶಿ ಹೇಳಿದರು.












