ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ವತಿಯಿಂದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ

0
520

ಸನ್ಮಾರ್ಗ ವಾರ್ತೆ

ಬೆಂಗಳೂರು: ರಾಜ್ಯದ ಯುವಕರಲ್ಲಿ ಫಿಟ್ನೆಸ್ ಮತ್ತು ಕ್ರೀಡಾ ಮನೋಭಾವವನ್ನು ಉತ್ತೇಜಿಸುವ ಸಲುವಾಗಿ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ರಾಯಚೂರಿನಲ್ಲಿ ನವೆಂಬರ್ 23 ಮತ್ತು 24 ರಂದು ನಡೆಸಲು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ತೀರ್ಮಾನಿಸಿದೆ.

ಈ ಕಾರ್ಯಕ್ರಮದ ಮೂಲಕ ಯುವಕರನ್ನು ದೈಹಿಕ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಯುವ ಪೀಳಿಗೆಯಲ್ಲಿ ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸಲು ಸೋಲಿಡಾರಿಟಿ ಬಯಸುತ್ತಿದೆ. ಆರೋಗ್ಯಕರ ಶರೀರದಲ್ಲಿ ಆರೋಗ್ಯಕರ ಮನಸ್ಸು ಎಂಬಂತೆ ಯುವಕರು ದೈಹಿಕವಾಗಿಯೂ ಮಾನಸಿಕವಾಗಿಯೂ ಬಲಿಷ್ಠವಾದರೆ ಒಂದು ಆರೋಗ್ಯಕರ ಸಮಾಜದ ನಿರ್ಮಾಣವಾಗುತ್ತದೆ.

ಯುವಕರಲ್ಲಿ ಸೃಜನಶೀಲತೆಯನ್ನು ಬೆಳೆಸಲು ಕ್ರೀಡೆಗಳು ನಿರ್ಣಾಯಕ ಪಾತ್ರ ವಹಿಸುತ್ತದೆ. ಕಬಡ್ಡಿ ಪಂದ್ಯಾವಳಿ ನಮ್ಮ ಮಧ್ಯೆ ಸ್ಪರ್ಧಾತ್ಮಕ ಮನೋಭಾವವನ್ನು ಹುಟ್ಟು ಹಾಕುವುದರ ಜೊತೆಗೆ ನಮ್ಮ ಮಧ್ಯೆ ಸೌಹಾರ್ದತೆ, ಸಾಮರಸ್ಯ ಹಾಗೂ ಪರಸ್ಪರ ಒಳಗೊಳ್ಳುವಿಕೆಯ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಮನಸ್ಸು ಮನಸ್ಸುಗಳನ್ನು ಬೆಸೆಯಲು ಸಹಕಾರಿಯಾಗುತ್ತದೆ.

ರಾಜ್ಯ ಮಟ್ಟದ ಈ ಪಂದ್ಯಾವಳಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ತಂಡಗಳು ಭಾಗವಹಿಸಲಿದ್ದು, ಸ್ಪರ್ಧಿಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಹಾಗೂ ತಮ್ಮ ಜಿಲ್ಲೆಯನ್ನು ಪ್ರತಿನಿಧಿಸಲು ಮುಕ್ತ ಅವಕಾಶವನ್ನು ಒದಗಿಸಲಾಗುವುದು. ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ ಐವತ್ತು ಸಾವಿರ ನಗದು ಹಾಗೂ ಟ್ರೋಫಿ ಮತ್ತು ಸರ್ಟಿಫಿಕೇಟ್ ದ್ವಿತೀಯ ಬಹುಮಾನವಾಗಿ ಮೂವತ್ತು ಸಾವಿರ ನಗದು ಹಾಗೂ ಟ್ರೋಫಿ ಮತ್ತು ಸರ್ಟಿಫಿಕೇಟ್, ತೃತೀಯ ಬಹುಮಾನವಾಗಿ ಹತ್ತು ಸಾವಿರ ನಗದು ಹಾಗೂ ಟ್ರೋಫಿ ಮತ್ತು ಸರ್ಟಿಫಿಕೇಟ್ ಅನ್ನು ನೀಡಲಾಗುವುದು.

ಪ್ರತಿ ಜಿಲ್ಲೆಯಿಂದ ಎರಡು ತಂಡಗಳನ್ನು ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗುತ್ತದೆ. ಪ್ರಚಾರದ ಸಲುವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪತ್ರಿಕಾಗೋಷ್ಠಿಗಳು, ಪೋಸ್ಟರ್ ಮತ್ತು ಟೀ ಶರ್ಟ್ ಬಿಡುಗಡೆಯ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಮಾಧ್ಯಮ ಪ್ರಚಾರವನ್ನೂ ನಡೆಸಲಾಗುವುದು.

ಸ್ಪರ್ದೆ ಮಾಡಲು ಇಚ್ಛಿಸುವ ಎಲ್ಲಾ ತಂಡಗಳು ಕೆಳಗೆ ನೀಡಿರುವ ಗೂಗಲ್‌ ಫಾರ್ಮ್‌ ಲಿಂಕ್ ನಲ್ಲಿ ತಮ್ಮ ವಿವರ ಭರ್ತಿ ಮಾಡಿ. ಹೆಚ್ಚಿನ ಮಾಹಿತಿಗಾಗಿ 7019951060, 8105073556 ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಿ. ನೋಂದಣೆಗೆ ಕೊನೆಯ ದಿನಾಂಕ 15-10-2024.

ಕಾರ್ಯಕ್ರಮದ ವಿವರಗಳು:

ದಿನಾಂಕ: ನವೆಂಬರ್ 23-24, 2024

ಸ್ಥಳ: ಸತ್ಯ ಗಾರ್ಡನ್, ರಾಯಚೂರು, ಕರ್ನಾಟಕ

ಗೂಗಲ್‌ ಲಿಂಕ್‌: https://forms.gle/FJLAYPjn7LraTgoF7