ಬಾಬರಿ ಮಸೀದಿ ವಿವಾದ: ಮಧ್ಯಸ್ಥಿಕೆ ಸಮಿತಿಗೆ ಸಮಯ ವಿಸ್ತರಿಸಿದ ಸುಪ್ರೀಂಕೋರ್ಟು

0
471

ಹೊಸದಿಲ್ಲಿ,ಮೇ 10: ಅಯೋಧ್ಯೆ ಬಾಬರಿ ಮಸೀದಿ ಜಮೀನು ವಿವಾದ ಪ್ರಕರಣದಲ್ಲಿ ಸುಪ್ರೀಂಕೋರ್ಟು ನಿಯೋಜಿಸಿರುವ ಮೂವರು ಸದಸ್ಯರ ಮಧ್ಯಸ್ಥಿಕೆ ಸಮಿತಿಗೆ ಕಾರ್ಯವೆಸಗಲು ಸಮಯಾವಧಿಯನ್ನು ಸುಪ್ರಿಂಕೋರ್ಟು ವಿಸ್ತರಿಸಿದೆ. ಚೀಫ್ ಜಸ್ಟಿಸ್ ರಂಜನ್ ಗೊಗೊಯಿ, ಜಸ್ಟಿಸ್ ಎಸ್.ಎ. ಬೊಬ್ಡೆ, ಡಿವೈ ಚಂದ್ರಚೂಡ, ಅಶೋಕ್ ಭೂಷಣ್, ಎಸ್. ಅಬ್ದುಲ್ ನಝೀರ್‍ರನ್ನೊಳಗೊಂಡ ಸಂವಿಧಾನ ಪೀಠ ಸಮಿತಿಯ ಸಮಯ ಮಿತಿಯನ್ನು ಆಗಸ್ಟ್ ಹದಿನೈದರವರೆಗೆ ವಿಸ್ತರಿಸಿ ಆದೇಶಿಸಿದೆ.

ಇದೇ ವೇಳೆ ಮಧ್ಯಸ್ಥಿಕೆ ಸಮಿತಿಯು ಬಾಬರಿ ಮಸೀದಿ ಪ್ರಕರಣದಲ್ಲಿ ಮಧ್ಯಂತರ ವರದಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದು ಕೋರ್ಟಿನ ರಿಜಿಸ್ಟ್ರೀಯ ಮುಂದೆ ಮೇ ಆರರ ಸೀಲು ಮಾಡಿದ ಲಕೋಟೆಯಲ್ಲಿ ವರದಿ ನೀಡಲಾಗಿತ್ತು. ವರದಿಯನ್ನು ಪರಿಶೀಲಿಸಿರುವ ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಮಧ್ಯಸ್ಥಿಕೆಗೆ ಸಮಯವಕಾಶವನ್ನು ಹೆಚ್ಚಿಸಿದೆ. ವಿವಾದ ಸಮನ್ವಯತೆ ಸಾಧ್ಯವೇ ಎಂಬ ಉದ್ದೇಶದಿಂದ ಸುಪ್ರೀಂಕೋಟು ಮಾರ್ಚ್ ಮಧ್ಯಸ್ಥಿಕೆ ಸಮಿತಿಯನ್ನು ನೇಮಕಗೊಳಿಸಿತ್ತು. ನಿವೃತ್ತ ಸುಪ್ರೀಂಕೋರ್ಟು ಜಡ್ಜ್ ಜಸ್ಟಿಸ್ ಎಫ್‍ಎಂಐ ಕಲೀಫುಲ್ಲ ಸಮಿತಿಯ ಅಧ್ಯಕ್ಷರಾಗಿದ್ದು ಶ್ರೀಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಮಧ್ಯಸ್ಥಿಕೆ ತಜ್ಞ ಶ್ರೀರಾಂ ಪಂಚು ಇತರ ಸದಸ್ಯರಾಗಿದ್ದಾರೆ. ವಿವಾದ ಜಮೀನು ಇರುವ ಫೈಝಾಬಾದಿನಲ್ಲಿ ಒಂದು ವಾರದೊಳಗೆ ಮಧ್ಯಸ್ಥಿಕೆ ಕ್ರಮಗಳನ್ನು ರಹಸ್ಯ ಸ್ವಭಾವದಲ್ಲಿ ನಡೆಸಬೇಕು. ಈ ಪ್ರಕ್ರಿಯೆಯ ಪ್ರಗತಿಯನ್ನು ನಾಲ್ಕು ವಾರದೊಳಗೆ ತಿಳಿಸಬೇಕೆಂದು ಸುಪ್ರೀಂಕೋರ್ಟು ಸೂಚಿಸಿತ್ತು. ಮಧ್ಯಸ್ಥಿಕೆಗೆ ಎಂಟು ವಾರಗಳ ಸಮಯವಕಾಶ ನೀಡಲಾಗಿತ್ತು.